ತನ್ನ ಮಾಜಿ ನಿಶ್ಚಿತ ವರನೊಂದಿಗೆ ಸಂಬಂಧ ಬೆಳೆಸಿಕೊಂಡು ಮದುವೆ ನಿಂತು ಹೋಗಲು ಕಾರಣಳಾಗಿದ್ದವಳ ಬಾಯ್ ಫ್ರೆಂಡ್ ಜೊತೆಯೇ ಮದುವೆಯಾಗುವ ಮೂಲಕ ಯುವತಿಯೊಬ್ಬಳು ಸೇಡು ತೀರಿಸಿಕೊಂಡಿದ್ದಾಳೆ.
ಸ್ಕಾಟ್ಲೆಂಡ್ನ ಜೇಡ್ ಪುರ್ವಿಸ್, ಟಿಕ್ಟಾಕ್ನಲ್ಲಿ ತನ್ನ ಕತೆಯನ್ನ ಶೇರ್ ಮಾಡಿದ್ದು ಈ ವಿಡಿಯೋ ಸಖತ್ ವೈರಲ್ ಆಗಿದೆ. ತನ್ನ ಮದುವೆ ನಿಂತು ಹೋಗಲು ಕಾರಣಳಾದವಳ ಬಾಯ್ಫ್ರೆಂಡ್ ಜೊತೆಯೇ ಮೂರು ವರ್ಷಗಳ ಕಾಲ ಸಂಬಂಧ ಬೆಳೆಸಿ ಆತನ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾಳೆ.
ಅಲ್ಲದೇ ಆ ಯುವತಿ ತನ್ನ ಬಾಯ್ಫ್ರೆಂಡ್ಗೂ ವಂಚನೆ ಮಾಡಿದ್ದಳು ಎಂಬ ಅಂಶವನ್ನೂ ಹೇಳಿದ್ದಾಳೆ. ಇದೀಗ ಮೋಸ ಹೋಗಿದ್ದ ಇಬ್ಬರು ಮದುವೆಯಾಗುವ ಮೂಲಕ ದ್ವೇಷ ತೀರಿಸಿಕೊಂಡಿದ್ದಾರೆ. ಅಂದ ಹಾಗೆ ಇದು ನಿನ್ನೆ ಮೊನ್ನೆಯ ಕತೆಯಲ್ಲ. 7 ವರ್ಷದ ಹಿಂದಿನ ಕತೆಯಾಗಿದೆ. ಹಾಗೂ 4 ವರ್ಷದ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.