alex Certify ಯುವತಿಗೆ ಕೊನೆಗೂ ಸಿಕ್ತು ಅಮ್ಮನ ಸಂದೇಶದ ಆಡಿಯೋ ಇದ್ದ ಟೆಡ್ಡಿ ಬೇರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಗೆ ಕೊನೆಗೂ ಸಿಕ್ತು ಅಮ್ಮನ ಸಂದೇಶದ ಆಡಿಯೋ ಇದ್ದ ಟೆಡ್ಡಿ ಬೇರ್

Woman Gets Back Her Stolen Teddy Bear That Had Her Mother's Last ...

ತನ್ನ ತಾಯಿಯ ಕಡೆಯ ಸಂದೇಶವಿದ್ದ ಟೆಡ್ಡಿ ಬೇರ್‌ ಗೊಂಬೆ ಮರಳಿ ಸಿಕ್ಕ ಮಾರಾ ಸೊರಾಯ್ನೋ ಎಂಬ ಯುವತಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ನೆಟ್ಟಿಗ ಸಮುದಾಯದ ನೆರವಿನಿಂದ ಸೊರಾಯ್ನೋಗೆ ತನ್ನ ಅಮೂಲ್ಯವಾದ ಉಡುಗೊರೆ ಮರಳಿ ಸಿಕ್ಕಿದೆ.

ತನ್ನ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದ ವೇಳೆ, ಜುಲೈ 24ರಂದು ಆ ಗೊಂಬೆ ಕಳುವಾಗಿತ್ತು ಎಂದು ಸೊರಾಯ್ನೋ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ರ‍್ಯಾನ್ ರೇನಾಲ್ಡ್ಸ್‌ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಟ್ವಿಟರ್‌ ಪ್ರೊಫೈಲ್‌ ಮೂಲಕ ಜನರ ಗಮನ ಸೆಳೆದು, ಆ ಟೆಡ್ಡಿ ಬೇರ್‌ ಅನ್ನು ಸೊರಾಯ್ನೋಗಾಗಿ ಹುಡುಕಿಕೊಟ್ಟವರಿಗೆ $5,000 ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅದೇ ಬ್ಯಾಗ್‌ನಲ್ಲಿ ಆಕೆಯ ಐಪ್ಯಾಡ್, ಬ್ಲಾಂಕ್ ಚೆಕ್‌ಗಳು ಹಾಗೂ ಇನ್ನಿತರೆ ಬೆಲೆಬಾಳುವ ಪದಾರ್ಥಗಳು ಇದ್ದವು.

ಅದಕ್ಕಿಂತ ಹೆಚ್ಚಾಗಿ, ಆ ಟೆಡ್ಡಿ ಬೇರ್‌ ಗೊಂಬೆ ಒಳಗೆ ಇದ್ದ ಆಡಿಯೋದಲ್ಲಿ ಸೊರಾಯ್ನೋ ತಾಯಿ ಆಕೆಗಾಗಿ ಕಡೆಯ ಬಾರಿಗೆ ಹೇಳಿದ್ದ ಸಂದೇಶವೊಂದು ರೆಕಾರ್ಡ್ ಆಗಿದ್ದ ಆಡಿಯೋ ಇತ್ತು. ಆಕೆಯ ತಾಯಿ, 53 ವರ್ಷದ ಮಾರ್ಲಿನ್ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.

ಇದೀಗ ತನ್ನ ಟೆಡ್ಡಿ ಬೇರ್‌ ಮರಳಿ ಸಿಕ್ಕಿದೆ ಎಂದು ಸೊರಾಯ್ನೋ ಟ್ವೀಟ್ ಮಾಡಿದ್ದಾರೆ. ಅಲ್ಲದೇ, ತಮ್ಮ ಮೆಚ್ಚಿನ ಟೆಡ್ಡಿ ಬೇರ್‌ ಗೊಂಬೆಯೊಂದಿಗೆ ಪೋಸ್ ಕೊಡುತ್ತಾ ಇರುವ ಫೋಟೋವೊಂದನ್ನು ಸೊರಾಯ್ನೋ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...