ಸೆಕೆಂಡ್ ಹ್ಯಾಂಡ್ಗೆ ಯಾವುದಾದರೂ ವಸ್ತುಗಳನ್ನ ಮಾರಾಟ ಮಾಡಬೇಕು ಅಂದಾಗ ಅದರಲ್ಲಿ ಲಾಭ ಹುಡುಕೋದು ಕೊಂಚ ಕಷ್ಟವೇ. ನಾವು ಈಗಾಗಲೇ ಆ ವಸ್ತುವನ್ನ ಬಳಕೆ ಮಾಡಿರೋದ್ರಿಂದ ಅದು ಕಡಿಮೆ ಬೆಲೆಗೆ ಮಾರಾಟವಾಗುತ್ತದೆ.
ಇದೇ ರೀತಿ ಮಹಿಳೆಯೊಬ್ಬರು 36, 500 ರೂಪಾಯಿಗೆ ತಮ್ಮ ಮನೆಯ ಸೋಫಾವನ್ನ ಮಾರಾಟ ಮಾಡಿದ್ದರು. ಬಳಿಕ ಆ ಸೋಫಾದ ನಿಜವಾದ ಬೆಲೆ 14.6 ಲಕ್ಷ ರೂಪಾಯಿ ಎಂದು ತಿಳಿದಾಗ ಶಾಕ್ ಆಗಿದ್ದಾರೆ.
ಹಿರಿಯ ಜೀವದ ’ಬಿಯರ್’ ಬಯಕೆ ಈಡೇರಿಸಿದ ಹೃದಯವಂತ
ಟಿಕ್ಟಾಕ್ನಲ್ಲಿ ಜೂಲ್ಸ್ ಶ್ರೇನರ್ ಎಂಬವರು ತಮಗಾದ ಈ ಸೋಫಾ ಅನುಭವವನ್ನ ಶೇರ್ ಮಾಡಿದ್ದಾರೆ. ಯಾರಿಂದಲೋ ಉಚಿತವಾಗಿ ಈ ಸೋಫಾವನ್ನ ಪಡೆದಿದ್ದ ಜೂಲ್ಸ್ ಫೇಸ್ಬುಕ್ನಲ್ಲಿ ಇದರ ಮಾರಾಟ ಮಾಡುತ್ತಿರೋದ್ರ ಬಗ್ಗೆ ಜಾಹೀರಾತನ್ನ ಹಾಕಿದ್ದಳು. ಇದಕ್ಕೆ 500 ಡಾಲರ್ ಮೌಲ್ಯವನ್ನ ನಿಗದಿ ಮಾಡಲಾಗಿತ್ತು. ಹಾಗೂ ಕೆಲವೇ ಸೆಕೆಂಡ್ಗಳನ್ನ ಈ ಸೋಫಾವನ್ನ ಯಾರೋ ಖರೀದಿ ಮಾಡಿದ್ದಾರೆ.
ಇದಾದ ಬಳಿಕ ಸೋಫಾ ಖರೀದಿ ಮಾಡಿದ ವ್ಯಕ್ತಿ ಇನ್ಸ್ಟಾಗ್ರಾಂನಲ್ಲಿ ಸೋಫಾದ ಬ್ರ್ಯಾಂಡ್ ಹೆಸರನ್ನ ಉಲ್ಲೇಖಿಸಿ ಫೋಟೋ ಶೇರ್ ಮಾಡಿದ್ದರು. ಈ ಸೋಫಾದ ಬ್ರ್ಯಾಂಡ್ನ್ನು ಜೂಲ್ಸ್ ಗೂಗಲ್ ಮಾಡಿ ನೋಡಿದಾಗ ಅದರ ನಿಜವಾದ ಬೆಲೆ ತಿಳಿದು ದಿಗ್ಭ್ರಮೆಗೊಳಗಾಗಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಯನ್ನ ಗಳಿಸಿದೆ.