ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಮಹಿಳೆಯೊಬ್ಬರು ತಮ್ಮ ಕಾರಿನಲ್ಲಿ ಭಾರೀ ಗಾತ್ರದ ಜೇಡವೊಂದನ್ನು ಕಂಡು ವಾರದ ಮಟ್ಟಿಗೆ ಡ್ರೈವಿಂಗ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ.
ತಮ್ಮ ಕಾರಿನ ಬಾಗಿಲ ಬಳಿ ಕಂಡ ಈ ಜೇಡದ ಚಿತ್ರವನ್ನು ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿರುವ ಕ್ರಿಸ್ಟೀನ್ ಜೋನ್ಸ್, “ಮೊದಲಿಗೆ ಅದನ್ನು ಕೇಶವಿರುವ ಕ್ಯಾಟರ್ಪಿಲ್ಲರ್ ಎಂದು ಭಾವಿಸಿದ್ದೆ. ನನ್ನ ಕಾರನ್ನು ಒಂದು ವಾರದಿಂದ ಬಳಸೇ ಇಲ್ಲ” ಎಂದು ಬರೆದುಕೊಂಡಿದ್ದಾರೆ.
ಸೈಡ್ ಹ್ಯಾಂಡಲ್ನ ಮೇಲ್ಮೈ ವಿಸ್ತೀರ್ಣದುದ್ದಕ್ಕೂ ತನ್ನ ಕಾಲುಗಳನ್ನು ಚಾಚಿ ಮಲಗಿರುವ ಜೇಡದ ಚಿತ್ರಗಳು ವೈರಲ್ ಆಗಿದ್ದು, ಪೋಸ್ಟ್ ಮಾಡಿದ ಕೆಲವೇ ಅವಧಿಯಲ್ಲಿ 500ಕ್ಕೂ ಹೆಚ್ಚು ಕಾಮೆಂಟ್ಗಳು ಸಿಕ್ಕಿವೆ.