alex Certify 23 ವರ್ಷದ ಹಿಂದಿನ ವಾಲ್ ಪೇಪರ್ ನಲ್ಲಿ ಬರೆದಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

23 ವರ್ಷದ ಹಿಂದಿನ ವಾಲ್ ಪೇಪರ್ ನಲ್ಲಿ ಬರೆದಿದ್ದೇನು ಗೊತ್ತಾ..?

ಲಂಡನ್: 23 ವರ್ಷದ ಹಿಂದೆ ವ್ಯಕ್ತಿಯೊಬ್ಬ ವಾಲ್ ಪೇಪರ್ ಹಿಂದೆ ಬರೆದ ಸಂದೇಶ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಚಾರ್ಲೆಟ್ ಮಾರ್ರಿಸ‌ನ್, ಎಂಬುವವರು ತಮ್ಮ ಕೋಣೆಯನ್ನು ಸ್ವಚ್ಛ ಮಾಡಿ, ಮರು ಜೋಡಣೆ ಮಾಡುವಾಗ ಅವರಿಗೊಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂತು. ಅದು ಕೇವಲ ಸಾಮಾನ್ಯ ಸಂದೇಶವಾಗಿರಲಿಲ್ಲ. ಮಾರ್ರಿಸನ್ ಅವರ ಮನ ತಟ್ಟಿದೆ‌.
ವಾಲ್ ಪೇಪರ್ ಒಂದರ ಹಿಂದೆ ಆ ಸಂದೇಶ ಬರೆದಿತ್ತು. ಜಾನ್ ಎಂಬುವವರು 1997 ಡಿಸೆಂಬರ್ 21 ರಂದು ಬರೆದದ್ದಾಗಿತ್ತು.
ಅದನ್ನು ಮಾರ್ರಿಸನ್ ಅವರು ಫೋಟೋ ಮಾಡಿ ಫೇಸ್ ಬುಕ್ ಗೆ ಅಪ್‌ಲೋಡ್ ಮಾಡಿದ್ದಾರೆ.

” ಇದು ನನ್ನನ್ನು ಚಕಿತ ಹಾಗೂ ಮುದಗೊಳಿಸಿತು. ಇದನ್ನು ಬರೆದ ಜಾನ್ ಅವರನ್ನು ನಾನು ಹುಡುಕಲು ಪ್ರಯತ್ನಿಸಿದೆ. ಅವರ ಸಂಬಂಧಿಕರು ಸಿಕ್ಕರು.‌ ಆದರೆ ಜಾನ್ ಸಿಗಲಿಲ್ಲ. ನಾನು ವಾಲ್ ಪೇಪರ್ ಗಳನ್ನು ಹರಿದು ಹಾಕಿ ಪೇಂಟ್ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಜಾನ್ ಅವರ ಸಂದೇಶದ ನಂತರ ಅದನ್ನು ಕೈ ಬಿಟ್ಟಿದ್ದೇನೆ” ಎಂದು ಆಕೆ ಬರೆದುಕೊಂಡಿದ್ದಾರೆ. ಆ ಪೋಸ್ಟ್ ನ್ನು 14 ಸಾವಿರ ಜನ ಹಂಚಿಕೊಂಡಿದ್ದಾರೆ. 5700 ಜನ ಇಷ್ಟಪಟ್ಟಿದ್ದಾರೆ.

ಹಾಗಾದರೆ ಜಾನ್ ಬರೆದಿದ್ದಾದರೂ ಏನು..? “ನೀವು ಈ ಕೋಣೆಗೆ ಮತ್ತೆ ವಾಲ್ ಪೇಪರ್ ಹಚ್ಚುವುದಿದ್ದರೆ, ಈ ಕೋಣೆಗೆ 8 ವಾಲ್ ಪೇಪರ್ ಬೇಕಾಗುತ್ತದೆ. ನಾನು ಆಗ 17 ಪೌಂಡ್ ಗೆ 6 ವಾಲ್ ಪೇಪರ್‌ ಮಾತ್ರ ಖರೀದಿಸುವಷ್ಟು ಹಣವಿತ್ತು” ಎಂದು ಜಾನ್ ಬರೆದಿದ್ದರು.

https://www.facebook.com/charlotte.wilkinson.3133/posts/2599636986958578

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...