ಕಳ್ಳರ ಕಾಟದಿಂದ ಬೇಸತ್ತಿದ್ದ ಮಹಿಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿ ಆತನಿಗೆ ಪಾಠ ಕಲಿಸುವ ಬದಲು ತಾನೇ ಕಳ್ಳನಿಗೆ ಚಳ್ಳೆ ಹಣ್ಣನ್ನ ತಿನ್ನಿಸಿದ್ದಾಳೆ.
ಕೆನಡಾದಲ್ಲಿ ವಾಸವಿದ್ದ ಮಹಿಳೆ ಪ್ರಿಂಗ್ಲೆ ಮನೆಯ ಮುಂದೆ ಡೆಲಿವರಿ ಆಗುತ್ತಿದ್ದ ವಸ್ತುಗಳನ್ನ ಯಾರೋ ಕಳ್ಳತನ ಮಾಡುತ್ತಿದ್ದರು. ಈ ಕಾಟದಿಂದ ಬೇಸತ್ತು ಹೋಗಿದ್ದ ಮಹಿಳೆ ಮನೆಯ ಮುಂದೆ ಒಂದು ಬಾಕ್ಸ್ನ್ನ ಇಟ್ಟಿದ್ದಾಳೆ. ವಿಶೇಷ ಅಂದ್ರೆ ಆಕೆ ಬಾಕ್ಸಿನೊಳಗೆ ಬೆಕ್ಕಿನ ಮಲವನ್ನ ಇಟ್ಟಿದ್ದಳು.
ಕಳ್ಳ ಯಾರೆಂಬುದನ್ನ ಪತ್ತೆ ಮಾಡೋಕೆ ನಿರ್ಧರಿಸಿದ ಮಹಿಳೆ ಮನೆಯ ಬಾಗಿಲಿಗೆ ಕ್ಯಾಮರಾವನ್ನೂ ಫಿಕ್ಸ್ ಮಾಡಿದ್ದಳು. ಆಕೆ ಆ ಬಾಕ್ಸ್ನ ಇಟ್ಟ ಕೇವಲ 40 ನಿಮಿಷದ ಒಳಗಾಗಿ ಕಳ್ಳ ಅದನ್ನ ಎಗರಿಸಿದ್ದ.
ಕ್ಯಾಮರಾದಲ್ಲಿ ಕಳ್ಳನ ಕರಾಮತ್ತಿನ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.