ಕಾರಿನಲ್ಲಿ ಚಲಿಸುವ ವೇಳೆ ಸ್ನಾಪ್ ಚಾಟ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಯುವತಿಯೊಬ್ಬರು ಕಿಟಕಿಯಿಂದ ರಸ್ತೆ ಮೇಲೆ ಬಿದ್ದ ಘಟನೆ ಸರ‍್ರೆಯಲ್ಲಿ ಜರುಗಿದೆ. ದಕ್ಷಿಣ ಲಂಡನ್‌ನ M25 ಮೋಟಾರ್ ವೇಯಲ್ಲಿ, ತನ್ನ ಕಾರಿನ ಕಿಟಕಿಯಿಂದ ತಲೆ ಆಚೆ ಹಾಕಿಕೊಂಡು ವಿಡಿಯೋ ಮಾಡುತ್ತಿದ್ದ ಈಕೆ ಆಯತಪ್ಪಿ ರಸ್ತೆಗೆ ಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅದೃಷ್ಟವಶಾತ್ ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಯುವತಿಗೆ ಪ್ಯಾರಾಮೆಡಿಕ್ಸ್ ಸೂಕ್ತ ಟ್ರೀಟ್ಮೆಂಟ್ ಕೊಟ್ಟಿದ್ದು, ಆಕೆ ಈಗ ಸೇಫ್ ಆಗಿದ್ದಾರೆ. ಘಟನೆ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.
ಯುವತಿಯ ಬೇಜವಾಬ್ದಾರಿ ನಡತೆಗೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
https://twitter.com/MichelleLetties/status/1307247684072468482?ref_src=twsrc%5Etfw%7Ctwcamp%5Etweetembed%7Ctwterm%5E1307247684072468482%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fwoman-falls-out-of-car-window-and-onto-busy-highway-while-filming-snapchat-video%2F656058