alex Certify ಕೋತಿಗಳಿಗೆ ಚಿಪ್ಸ್​ ನೀಡಲು ಹೋಗಿ ಕೆಲಸ ಕಳೆದುಕೊಂಡ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋತಿಗಳಿಗೆ ಚಿಪ್ಸ್​ ನೀಡಲು ಹೋಗಿ ಕೆಲಸ ಕಳೆದುಕೊಂಡ ಮಹಿಳೆ….!

ಮೃಗಾಲಯವೊಂದರಲ್ಲಿ ಕೋತಿಗಳಿಗೆ ಮೀಸಲಿಟ್ಟ ಸ್ಥಳದ ಒಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆಯೊಬ್ಬರು ಅವುಗಳಿಗೆ ತಿನ್ನಲು ಚಿಪ್ಸ್​ ನೀಡುತ್ತಿರುವ ಶಾಕಿಂಗ್​ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಟೆಕ್ಸಾಸ್​ನ ಎಲ್​ ಪಾಸೋ ಮೃಗಾಲಯದಲ್ಲಿ ಈ ಘಟನೆ ಸಂಭವಿಸಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಮಹಿಳೆಯನ್ನ ಕೆಲಸದಿಂದ ಕಿತ್ತು ಹಾಕಲಾಗಿದೆ.

ವಿಡಿಯೋದಲ್ಲಿ ಝರಿ ಬಳಿ ಕುಳಿತುಕೊಂಡಿರುವ ಮಹಿಳೆ ತನ್ನ ಮುಂದಿರುವ ಕೋತಿಗಳ ಎದುರು ಚಿಪ್ಸ್​ನ್ನು ಎಸೆಯುತ್ತಾಳೆ. ಕೆಲ ಸೆಕೆಂಡ್​ಗಳ ಬಳಿಕ ಅಲ್ಲಿಂದು ಎದ್ದು ಬರುವ ಮಹಿಳೆ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಆ ಸ್ಥಳದಿಂದ ಹೊರ ನಡೆದಿದ್ದಾಳೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಸೋಶಿಯಲ್​ ಮೀಡಿಯಾದಲ್ಲಿ ಮಹಿಳೆಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ಮಹಿಳೆ ಕೆಲಸ ಮಾಡುತ್ತಿದ್ದ ಕಂಪನಿ ಸಹ ಮೃಗಾಲಯಕ್ಕೆ ಸಾಥ್​ ನೀಡಿದ್ದು ಮಹಿಳೆಯನ್ನ ಕೆಲಸದಿಂದ ಕಿತ್ತು ಹಾಕಿದ್ದಾರೆ.

ಎಲ್​ಪಾಸೋ ಮೃಗಾಲಯದಲ್ಲಿ ಕೋತಿಗಳು ಇರುವ ಪ್ರದೇಶದಲ್ಲಿ ಅಕ್ರಮವಾಗಿ ಮಹಿಳೆಯು ಪ್ರವೇಶಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಮಹಿಳೆಯು ನಮ್ಮ ಕಂಪನಿಯ ಉದ್ಯೋಗಿಯಾಗಿದ್ದು ಆಕೆಯನ್ನ ಕೆಲಸದಿಂದ ವಜಾಗೊಳಿಸಿದ್ದೇವೆ. ನಮ್ಮ ಸಂಸ್ಥೆ ಎಂದಿಗೂ ಪ್ರಾಣಿ ಹಿತವನ್ನ ಕಾಪಾಡುವಲ್ಲಿ ಬದ್ಧವಾಗಿದೆ. ಈ ಅಜಾಗರೂಕ ನಡವಳಿಕೆಯನ್ನ ನಾವು ಕ್ಷಮಿಸಲು ಸಾಧ್ಯವಿಲ್ಲ ಎಂದು ಲೋವೆಟ್​ ಲಾ ಫರ್ಮ್​ ಕಂಪನಿ ಹೇಳಿಕೆ ನೀಡಿದೆ.

https://www.instagram.com/p/CPMpxNGHRjj/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...