alex Certify ಇನ್ನೇನು ಅಂತಿಮ ಸಂಸ್ಕಾರವಾಗಲಿದ್ದ ತಾಯಿ ಜೀವಂತ ಇರುವುದನ್ನು ಗುರುತಿಸಿದ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೇನು ಅಂತಿಮ ಸಂಸ್ಕಾರವಾಗಲಿದ್ದ ತಾಯಿ ಜೀವಂತ ಇರುವುದನ್ನು ಗುರುತಿಸಿದ ಪುತ್ರಿ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಾತ್ರವೇ ನೋಡಬಹುದಾದ ಘಟನೆಯೊಂದರಲ್ಲಿ, ಮೃತಪಟ್ಟಿದ್ದಾರೆ ಎಂದು ವೈದ್ಯರಿಂದ ಘೊಷಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಇನ್ನೇನು ಅಂತಿಮ ಸಂಸ್ಕಾರವಾಗುವ ಮುನ್ನ ಬದುಕಿದ್ದಾರೆ ಎಂದು ತಿಳಿದುಬಂದಿದೆ.

ಈಶಾನ್ಯ ಅರ್ಜೆಂಟೀನಾದ ರೆಸಿಸ್ಟೆಂಷಿಯಾದಲ್ಲಿ ಜರುಗಿದ ಈ ಘಟನೆಯಲ್ಲಿ, 89 ವರ್ಷ ವಯಸ್ಸಿನ ಹಿರಿಯ ಮಹಿಳೆಯೊಬ್ಬರನ್ನು ಎದೆ ನೋವಿನ ಕಾರಣ ಜನವರಿ 23ರಂದು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಮಾರನೇ ದಿನ ಈಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸಿ, 54 ವರ್ಷ ವಯಸ್ಸಿನ ಈಕೆಯ ಮಗಳಿಗೆ ಮರಣ ಪ್ರಮಾಣ ಪತ್ರವನ್ನೂ ಸಹ ವೈದ್ಯರು ಕೊಟ್ಟಿದ್ದರು.

BCCI ಅಧ್ಯಕ್ಷ ಸೌರವ್ ಗಂಗೂಲಿಗೆ ಸ್ಟೆಂಟ್ ಅಳವಡಿಕೆ, ಆಸ್ಪತ್ರೆಗೆ ದೀದಿ ಭೇಟಿ

ಇನ್ನೇನು ತನ್ನ ತಾಯಿಯ ಅಂತಿಮ ಸಂಸ್ಕಾರ ನೆರವೇರಲಿದೆ ಎನ್ನುವಷ್ಟರಲ್ಲಿ ಆಕೆಗೆ ಇನ್ನೂ ಜೀವ ಇದೆ ಎಂದು ಕಂಡುಕೊಂಡ ಮಗಳು ಆಕೆಯನ್ನು ಮರಳಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಈ ತಾಯಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಘಟನೆಯ ತನಿಖೆಯನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...