ಕಾರ್ಮಿಕ ನ್ಯಾಯಾಲಯವೊಂದು ಮೃತಪಟ್ಟಿರುವುದಾಗಿ ಘೋಷಿಸಿದ ಬಳಿಕ ಮಹಿಳೆಯೊಬ್ಬರು ತಾವು ಜೀವಂತ ಇರುವುದಾಗಿ ಸಾಬೀತು ಮಾಡಲು ಪಾಡು ಪಡುತ್ತಿರುವ ಘಟನೆ ಫ್ರಾನ್ಸ್‌ನ ಲ್ಯಾನ್‌ನಲ್ಲಿ ಜರುಗಿದೆ.
ಜೆಯನ್ ಪೌಷಾಯಿನ್ ಹೆಸರಿನ 58 ವರ್ಷದ ಈ ಮಹಿಳೆ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಕಾರ್ಮಿಕ ನ್ಯಾಯಾಲಯ ಘೋಷಿಸಿತ್ತು. ಖುದ್ದು ಈಕೆಯ ಕೈಕೆಳಗೆ ಕೆಲಸ ಮಾಡುತ್ತಿದ್ದ ಉದ್ಯೋಗಿ ಕೊಟ್ಟ ವಿವರಗಳ ಆಧಾರದ ಮೇಲೆ ನ್ಯಾಯಾಲಯ ಹೀಗೆ ಘೋಷಿಸಿತ್ತು. ಬಳಿಕ ಐಡಿ ಕಾರ್ಡ್, ಚಾಲಕರ ಪರವಾನಿಗೆ, ಬ್ಯಾಂಕ್ ಖಾತೆ, ಆರೋಗ್ಯ ವಿಮೆ ಸೇರಿದಂತೆ ಎಲ್ಲ ಅಧಿಕೃತ ದಾಖಲೆಗಳಲ್ಲೂ ಆಕೆಯ ಹೆಸರು ಅಳಿಸಿಹೋಗಿತ್ತು.
ತನ್ನ ಸಾವಿನ ಕಥೆಯನ್ನು ಸೃಷ್ಟಿಸಿ ವಾರಸುದಾರರಾದ ತನ್ನ ಪತಿ ಹಾಗೂ ಮಗನಿಂದ ಡ್ಯಾಮೇಜ್ ಪರಿಹಾರ ಕಟ್ಟಿಸಿಕೊಳ್ಳಲು ಈ ಮಾಜಿ ಉದ್ಯೋಗಿ ಪೌಷೆನ್‌ರನ್ನು ಮೃತಪಟ್ಟಿದ್ದಾರೆ ಎಂದು ಸೃಷ್ಟಿಸಲು ಈ ಹಿಂದೆ ಎರಡು ವಿಫಲ ಯತ್ನಗಳನ್ನು ಮಾಡಿದ್ದಳು.
2000ನೇ ಇಸವಿಯಲ್ಲಿ ದೊಡ್ಡ ಕಾಂಟ್ರಾಕ್ಟ್ ಒಂದು ಕೈತಪ್ಪಿ ಹೋದ ಕಾರಣದಿಂದ ಪೌಷೆನ್‌ರ ಕ್ಲೀನಿಂಗ್ ಕಂಪನಿಯಿಂದ ಈ ಮಾಜಿ ಉದ್ಯೋಗಿಯನ್ನು ಫೈರ್ ಮಾಡಲಾಗಿತ್ತು. ಇದರ ಬೆನ್ನಿಗೆ ಫೈರ್ ಆದ ಉದ್ಯೋಗಿಗೆ ಪರಿಹಾರ ರೂಪದಲ್ಲಿ 14 ಸಾವಿರ ಯೂರೋಗಳನ್ನು ಕಟ್ಟಿಕೊಡಲು ಪೌಷೆನ್‌ಗೆ ಕಾರ್ಮಿಕ ನ್ಯಾಯಾಲಯವೊಂದು 2004ರಲ್ಲಿ ಪೌಷೆನ್‌ರ ಕಂಪನಿಗೆ ಆದೇಶ ನೀಡಿತ್ತು. ಆದರೆ ಈ ಆದೇಶ ಪಾಲನೆ ಆಗಿರಲಿಲ್ಲ. 2009ರಲ್ಲಿ ಇಂಥದ್ದೇ ಮತ್ತೊಂದು ಕೇಸ್ ಹಾಕಿದ್ದ ಮಾಜಿ ಉದ್ಯೋಗಿ ಮತ್ತೊಮ್ಮೆ ವಿಫಲರಾಗಿದ್ದರು.
2016ರಲ್ಲಿ ಈಕೆ ಮಾಡಿದ ಮತ್ತೊಂದು ಯತ್ನ ಕೈಗೂಡಿ, ಪೌಷೆನ್ ಮೃತಪಟ್ಟಿರುವುದಾಗಿ ನಂಬಿದ ಕೋರ್ಟ್, ಆಕೆಯ ಪತಿ ಹಾಗೂ ಪುತ್ರರಿಗೆ ಪರಿಹಾರದ ದುಡ್ಡು ಕಟ್ಟಿಕೊಡಲು ಆದೇಶಿಸಿತ್ತು.