OMG: ಗರ್ಭವತಿಯಾಗಿದ್ದ ವೇಳೆಯೇ ಮತ್ತೊಂದು ಮಗುವಿಗೆ ಗರ್ಭ ಧರಿಸಿದ ಮಹಿಳೆ…! 09-02-2021 11:14AM IST / No Comments / Posted In: Latest News, International, Special ಗರ್ಭ ಧರಿಸುವ ಪ್ರಕ್ರಿಯೆ ಪ್ರಕೃತಿಯ ಅತ್ಯಂತ ಸುಂದರ ನಿಯಮಗಳಲ್ಲೊಂದು. ಒಂದು ಜೀವವನ್ನ ಗರ್ಭದಲ್ಲಿಟ್ಟು ಅದಕ್ಕೆ ಜನ್ಮ ನೀಡೋದು ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಕೆಲವರಂತೂ ಅವಳಿ ಮಕ್ಕಳ ತಾಯಿಯಾಗ್ತಾರೆ. ಆದರೆ ಬ್ರಿಟನ್ನಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ ತಾಯಿಯೊಬ್ಬರು ಕೇವಲ ಮೂರು ವಾರದ ಅಂತರದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗರ್ಭವತಿಯಾಗಿದ್ದ ವೇಳೆಯೇ ಮತ್ತೊಂದು ಮಗುವಿಗೆ ಮಹಿಳೆ ಗರ್ಭ ಧರಿಸೋದನ್ನ ವೈದ್ಯಕೀಯ ಭಾಷೆಯಲ್ಲಿ ಸೂಪರ್ಫೆಟೆಷನ್ ಎಂದು ಕರೆಯಲಾಗುತ್ತೆ. ಮೊದಲನೇ ಬಾರಿಗೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರೆ ಮೂರು ವಾರಗಳ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಧಾರಣೆ ಸಮಯದಲ್ಲಿ ತೂಕ ಏರಿದೆಯಾ….? ಹೀಗೆ ಇಳಿಸಿ 39 ವರ್ಷದ ರೆಬೆಕಾ ರೋಬರ್ಟ್ಸ್ ಈಗ ಮಗಳು ರೊಸಲೆ ಹಾಗೂ ಪುತ್ರ ನಾಹ್ ಎಂಬ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಅವಳಿ ಮಕ್ಕಳು ಅಂದರೆ ಒಂದೇ ದಿನ ಜನಿಸಬೇಕು ಅಲ್ಲವೇ..?ಆದರೆ ಈ ಮಕ್ಕಳು ಮೂರು ವಾರಗಳ ಅಂತರದಲ್ಲಿ ಜನಿಸಿವೆ. ಸೂಪರ್ಫಟೆಷನ್ ಎಂಬ ಈ ವೈದ್ಯಕೀಯ ಪ್ರಕ್ರಿಯೆ ಅತ್ಯಂತ ಅಪರೂಪದ ಪ್ರಕರಣವಾಗಿದ್ದು ಇಡೀ ವಿಶ್ವದಲ್ಲಿ ಇಂತಹ ಡಜನ್ ಕೇಸ್ಗಳು ಇರಬಹುದು.