ವಿಶಿಷ್ಟವಾದ ಚಟುವಟಿಕೆಗೆ ತಮ್ಮ ಗಮನ ಹಾಗೂ ಶಕ್ತಿ ಕೇಂದ್ರೀಕರಿಸುವ ಅನೇಕ ಮಂದಿ ನಮ್ಮ ಸುತ್ತಲೂ ಇದ್ದಾರೆ. ಇಲ್ಲೊಬ್ಬರು ವರ್ಷವಿಡೀ ಉದುರುವ ತಮ್ಮ ಕೂದಲನ್ನು ಸಂಗ್ರಹಿಸಿ, ಅದರಿಂದ ಕೃತಕ ಜುಟ್ಟು ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಜುಟ್ಟನ್ನು ಜನರು ಬಳಸುತ್ತಾರೆ. ಆದರೆ ಈ ಮಹಿಳೆ ವರ್ಷಪೂರ್ತಿ ಉದುರುವ ತಮ್ಮ ಕೂದಲನ್ನು ಜಿಪ್‌ಲಾಕ್ ಪ್ಯಾಕೆಟ್ ಒಂದರಲ್ಲಿ ಸಂಗ್ರಹಿಸಿ ತಮ್ಮದೇ ಆದ ಜುಟ್ಟೊಂದನ್ನು ರಚಿಸಿದ್ದಾರೆ.
ಮುಷ್ಕರ ನಿರತ ಸಾರಿಗೆ ನೌಕರರ ವರ್ಗಾವಣೆ; ಕುಟುಂಬಸ್ಥರ ಪ್ರತಿಭಟನೆ; ಕನ್ನಡಪರ ಸಂಘಟನೆಗಳ ಸಾಥ್
ತಮಗೆ ಪ್ರತಿನಿತ್ಯ 40-200 ಕೂದಲುಗಳು ಉದುರುವನ್ನು ಗಮನಿಸಿದ ಈಕೆ, 365 ದಿನಗಳ ಅವಧಿಯಲ್ಲಿ 36,000 ಕೂದಲುಗಳು ಉದುರುತ್ತವೆ ಎಂಬ ಅಂದಾಜಿಗೆ ಬಂದಿದ್ದಾರೆ.
ಇದಾದ ಮೇಲೆ ಅವರು ಶವರ್, ಹಾಸಿಗೆ, ದಿಂಬು…….ಹೀಗೆ ಎಲ್ಲೆಲ್ಲಿ ತಮ್ಮ ಕೂದಲು ಸಿಕ್ಕಿತ್ತೋ ಅಲ್ಲೆಲ್ಲಾ ಅವನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಜಿಪ್‌ಲಾಕ್ ಬ್ಯಾಗ್ ತುಂಬಾ ಕೂದಲು ತುಂಬಿಕೊಂಡ ಬಳಿಕ ಒಂದೊಂದೇ ಕೂದಲಿನ ಎಳೆಗಳನ್ನು ನಾಜೂಕಾಗಿ ಆರಿಸಿ ಡಬಲ್ ಸೈಡ್ ಟೇಪ್ ಒಂದಕ್ಕೆ ಅಂಟಿಸಿದ್ದಾರೆ.
ಇಡೀ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿರುವ ಈಕೆ ಅದನ್ನು ಯೂಟ್ಯೂಬ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರ ಈ ವಿಡಿಯೋಗೆ 21 ದಶಲಕ್ಷ ವೀವ್ಸ್ ಸಿಕ್ಕಿದ್ದು, ಫೇಸ್ಬುಕ್ ಹಾಗೂ ಟ್ವಿಟರ್‌ಗಳಂಥ ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರಂಗಳಲ್ಲಿ ವೈರಲ್ ಆಗಿದೆ.
https://www.youtube.com/watch?v=eXGAnYjO5Dk&t=1s