ಶಸ್ತ್ರಚಿಕಿತ್ಸೆ ಮೂಲಕ ಅತಿ ದೊಡ್ಡ ಕೆನ್ನೆ ಪಡೆದ ಮಹಿಳೆ..! 25-05-2021 6:32AM IST / No Comments / Posted In: Latest News, International ಉಕ್ರೇನ್ ರಾಜಧಾನಿ ಕೀವ್ನ ನಿವಾಸಿ ಅನಸ್ತಾಸಿಯಾ ಪೊಕ್ರೇಶ್ಚುಕ್ ವಿಶ್ವದಲ್ಲೇ ಅತೀ ದೊಡ್ಡ ಕೆನ್ನೆಯನ್ನ ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಪ್ರಚಲಿತದಲ್ಲಿದ್ದಾರೆ. ಇದೀಗ ಅವರು ತಾವು ಈ ರೀತಿಯ ಗಲ್ಲವನ್ನ ಹೊಂದಲು ಯಾವ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಅನ್ನೋದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಈಕೆ ತಮ್ಮ ವಿಚಿತ್ರ ಮುಖಚರ್ಯೆ ಮೂಲಕವೇ ಕಳೆದ ಅನೇಕ ವರ್ಷಗಳಿಂದ ಇನ್ಸ್ಟಾಗ್ರಾಂನಲ್ಲಿ ಫೇಮಸ್ ಆಗಿದ್ದಾರೆ. ಲಿಪ್ ಫಿಲ್ಲರ್ಸ್, ವೆನೀರ್ಸ್, ಗದ್ದ ಹಾಗೂ ದವಡೆ ಮಾರ್ಪಾಡು ಹೀಗೆ ಅನೇಕ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಈ ಶಸ್ತ್ರಚಿಕಿತ್ಸೆಗಳಿಗೆ ಈಕೆ 2100 ಡಾಲರ್ಗೂ ಅಧಿಕ ಹಣ ವ್ಯಯಿಸಿದ್ದಾರೆ. ಇಷ್ಟೆಲ್ಲ ಶಸ್ತ್ರಚಿಕಿತ್ಸೆಗಳ ಬಳಿಕವೂ ಅನಸ್ತಾಸಿಯಾಗೆ ಸಮಾಧಾನವಿಲ್ಲವಂತೆ. ಇನ್ನೂ ನನ್ನ ದೇಹದಲ್ಲಿ ಅನೇಕ ಬದಲಾವಣೆಗಳನ್ನ ಮಾಡುವ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಶಸ್ತ್ರಚಿಕಿತ್ಸೆಗೆ ಒಳಗಾಗೋದಾಗಿ ಹೇಳಿಕೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಅನಸ್ತಾಸಿಯಾ ಶಸ್ತ್ರಚಿಕಿತ್ಸೆಗೂ ಮೊದಲೂ ತಾನು ಹೇಗಿದ್ದೆ ಎಂಬುದನ್ನ ತೋರಿಸಲು ಹಳೆಯ ಫೋಟೋವೊಂದನ್ನ ಶೇರ್ ಮಾಡಿದ್ದರು . ಮೊದಲ ಬಾರಿಗೆ ಚುಚ್ಚುಮದ್ದನ್ನ ಪಡೆದ ಬಳಿಕ ನನ್ನ ಕೆನ್ನೆಯಲ್ಲಾದ ಬದಲಾವಣೆಯನ್ನ ನಾನು ಗಮನಿಸಿದೆ. ನನಗೆ ಈ ಬದಲಾವಣೆ ತುಂಬಾನೇ ಇಷ್ಟವಾಯಿತು. ಉಳಿದವರಿಗೆ ಇದು ವಿಚಿತ್ರ ಎನಿಸಬಹುದು. ಆದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಕೆನ್ನೆಯಲ್ಲಾದ ಬದಲಾವಣೆಯು ನನ್ನಲ್ಲಿ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ ಎಂದು ಅನಸ್ತಾಸಿಯಾ ಹೇಳಿದ್ರು.