ಅಮೆರಿಕದ ನ್ಯೂ ಒರ್ಲಿಯನ್ಸ್ ಪ್ರದೇಶದ ಈ ಮಹಿಳೆ ಒಂದು ಅಸಹಜ ವಿಚಾರವೊಂದರ ಹುಟ್ಟುಹಬ್ಬ ಆಚರಿಸುವ ಮೂಲಕ ಭಾರೀ ವೈರಲ್ ಆಗಿದ್ದಾರೆ.
ತನ್ನ ಏರಿಯಾದ ಬೀದಿಯೊಂದರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯೊಂದರ ಮೇಲೆ ಕುಳಿತಿರುವ ಈ ಮಹಿಳೆ, ಕೇಕ್ ಜೊತೆಗೆ ತನ್ನ ಫೋಟೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬರೋಬ್ಬರಿ 500 ವರ್ಷಗಳ ಬಳಿಕ ಹೋಳಿ ಹಬ್ಬಕ್ಕೆ ಸಜ್ಜಾದ ಅಯೋಧ್ಯಾ..!
“ಸರಿಯಾಗಿ ಒಂದು ವರ್ಷದ ಹಿಂದೆ ನಮ್ಮ ಬೀದಿಯ ರಸ್ತೆಯನ್ನು ಕೀಳಲು ಆರಂಭಿಸಿದರು. ವರ್ಷದ ಬಳಿಕ ಅರ್ಧದಷ್ಟು ರಸ್ತೆಯಲ್ಲಿ ಹಾದು ಹೋಗಲು ಸಾಧ್ಯವಿಲ್ಲ. ಕಳೆದ ವಾರದವರೆಗೂ ಈ ರಸ್ತೆಯಲ್ಲಿ ಆರು ಅಡಿಯಷ್ಟು ಬೃಹತ್ ಗುಂಡಿಯೊಂದು ಇತ್ತು” ಎಂದು ತನ್ನ ಈ ಪೋಸ್ಟ್ನ ಕ್ಯಾಪ್ಷನ್ನಲ್ಲಿ ತಿಳಿಸಿದ್ದಾರ ನಟಾಲಿ ಹಾರ್ವೆ ಹೆಸರಿನ ಈ ಮಹಿಳೆ.
ನಿರ್ಮಾಣ ಹಂತದಲ್ಲಿರುವ ರಸ್ತೆಯ ಸಾಮಾನ್ಯ ದೃಶ್ಯಾವಳಿಯನ್ನು ಕೇಕ್ನಲ್ಲಿ ಬಿತ್ತರಿಸಲಾಗಿದ್ದು, ’ರಸ್ತೆ ಮುಚ್ಚಲಾಗಿದೆ’ ಎಂಬ ಫಲಕವನ್ನೂ ಸಹ ಹಾಕಲಾಗಿದೆ. ಈ ಮೂಲಕ ಸಂಬಂಧಿತ ಪ್ರತಿನಿಧಿಗಳನ್ನು ರಚನಾತ್ಮಕವಾಗಿ ಅಣಕಿಸಿದ್ದಾರೆ ನಟಾಲಿ.