ನ್ಯೂ ಮೆಕ್ಸಿಕೊ: ಅದ್ಬುತ ಉಲ್ಕಾಪಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಗೀತಗಾರ್ತಿ ಅಂಬೆರ್ ಕೊಪೆಮ್ನ್ ಅವರು ನ್ಯೂ ಮೆಕ್ಸಿಕೋದ ತಾವೋಸ್ ನಲ್ಲಿ ಸೆರೆ ಹಿಡಿದಿದ್ದು, ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
“ಗಾಯ್ಸ್ ನಾವು ಜೀವನದಲ್ಲಿ ಎಂದೂ ನೋಡದ ಅತಿ ಉತ್ಸಾಹದ ಸನ್ನಿವೇಶವೊಂದನ್ನು ನೋಡಿದ್ದೇವೆ. ಕೆಲ ಭಾಗ ಸೆರೆ ಹಿಡಿದಿದ್ದೇವೆ. ಉಲ್ಕೆಯೊಂದು ಜೀವಿತಾವಧಿ ಮುಗಿಸಿ ಬೀಳುವ ದೃಶ್ಯ ಇದಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
“ಉಲ್ಕೆ ಪರ್ವತವೊಂದರ ಭಾಗವನ್ನು ಛಿದ್ರ ಮಾಡಿದೆ. ನಿರ್ದಿಷ್ಟ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಆದರೆ, ಬಿದ್ದ ಜಾಗ ಸಂಪೂರ್ಣ ಕೆಂಪಾಗಿರಬೇಕು” ಎಂದು ಬರೆದುಕೊಂಡಿದ್ದಾರೆ.
“ಅಂಬೆರ್ ಕೊಫೆಮ್ನ್ ಅವರ ಕ್ಯಾಮರಾ ಅತಿ ಚುರುಕಾಗಿ ಕೆಲಸ ಮಾಡಿದೆ. ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಪ್ರತಿ ಸೆಕೆಂಗ್ ಗೆ 10 ರಿಂದ 75 ಕಿಮೀ ವೇಗದಲ್ಲಿ ಅಪ್ಪಳಿಸುತ್ತವೆ. ವಾತಾವರಣದಲ್ಲಿ ಉಂಟಾದ ಘರ್ಷಣೆಯಿಂದ ಉಲ್ಕೆಯ ವೇಗ ಚಿತ್ರ ತೆಗೆಯುವ ಸಂದರ್ಭದಲ್ಲಿ ಸ್ವಲ್ಪ ಕಡಿಮೆಯಾಗಿರಬಹುದು ಎಂದುಕೊಂಡಿದ್ದೇನೆ” ಎಂದು ಡಾ.ಜೆಮ್ಸ್ ಒ ಡೊನೊಗ್ ಹೇಳಿಕೊಂಡಿದ್ದಾರೆ.
https://twitter.com/Amber_Coffman/status/1288312386537967617?ref_src=twsrc%5Etfw%7Ctwcamp%5Etweetembed%7Ctwterm%5E1288312386537967617%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fwoman-captures-stunning-meteor-shower-once-in-a-lifetime-footage-goes-viral-watch%2F629856