
ಕರೆಯದೇ ಬರುವ ಅತಿಥಿಯನ್ನು ಯಾರೂ ಇಷ್ಟಪಡುವುದಿಲ್ಲ. ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಸಾಕುಪ್ರಾಣಿ ಅಥವಾ ಯಾವುದೇ ಪ್ರಾಣಿಯಾದರೂ ಸರಿ. ಇದೇ ರೀತಿ ಮನೆಗೆ ಬಂದ ಬಾವಲಿಯನ್ನು ಹಿಡಿದು ಹೊರ ಹಾಕಿದ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದಂಪತಿಗಳು ವಿಡಿಯೋ ಒಂದನ್ನು ಹಾಕಿದ್ದು, ಅದರಲ್ಲಿ ಮನೆಯಲ್ಲಿ ಬಾವಲಿಯೊಂದು ಸೇರಿಕೊಂಡಿದೆ. ಅದನ್ನು ಪತ್ನಿ ಹಿಡಿಯಲು ಪ್ರಯತ್ನಿಸಿದ್ದಾಳೆ. ಆರಂಭದಲ್ಲಿ ಸಫಲತೆ ಸಿಗದಿದ್ದರೂ ನಂತರ ಯಶಸ್ವಿಯಾಗಿದ್ದಾಳೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪತ್ನಿಯನ್ನು ಪತಿ ಚಾಂಪಿಯನ್ ಎಂದು ಕರೆದಿದ್ದಾನೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಮಹಿಳೆಯ ತಾಕತ್ತಿನ ಬಗ್ಗೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.