ಕೊರೊನಾ ವೈರಸ್ ಲಾಕ್ ಡೌನ್‌ನಿಂದ ಜಗತ್ತಿನಾದ್ಯಂತ ಜನರಿಗೆ ಬೋರಾಗಿ ಹೋಗಿದೆ. ಈ ಅವಧಿಯಲ್ಲಿ ಬಾಯಿ ಚಪಲ ತೀರಿಸಿಕೊಳ್ಳಲು ಕೆಲವರು ಮನೆಗಳಲ್ಲೇ ಹೊಸ ರುಚಿಗಳನ್ನು ಮಾಡುತ್ತಿದ್ದರೆ ಮತ್ತೆ ಕೆಲವರು ಆನ್ಲೈನ್‌ನಲ್ಲಿ ತರಿಸಿಕೊಂಡು ತಿನ್ನುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಈ ವೇಳೆ ಬಾಯಿರುಚಿ ತಡೆದುಕೊಳ್ಳಲಾರದ ಯುವತಿಯೊಬ್ಬರು ಲಾಕ್ ಡೌನ್ ನಿಯಮಾವಳಿ ಉಲ್ಲಂಘಿಸಿ, ತಮ್ಮ ಮನೆಯಿಂದ 75 ಕಿಮೀ ದೂರಕ್ಕೆ ಡ್ರೈವಿಂಗ್ ಮಾಡಿಕೊಂಡು ಹೋಗಿ ಕಬಾಬ್ ತಂದುಕೊಂಡು ತಿಂದಿದ್ದಾರೆ.
ಮಾರ್ಗಮಧ್ಯದಲ್ಲಿ ಈಕೆಯ ಕಾರನ್ನು ಪೊಲೀಸರು ಅಡ್ಡಗಟ್ಟಿದಾಗ, ತಾನು ಅಲ್ಲಿನ ಗೀಲಾಂಗ್‌ನವಳಾಗಿದ್ದು, ಕಬಾಬ್ ತಿನ್ನಲು ಮೆಲ್ಬರ್ನ್‌ನತ್ತ ಸಾಗುತ್ತಿದ್ದು ಹಾಗೇ ವೆರ‍್ರಿಬೀ ಪ್ರದೇಶದಲ್ಲಿರುವ ತನ್ನ ಬಾಯ್‌ಫ್ರೆಂಡ್ ಅನ್ನು ಭೇಟಿಯಾಗುವುದಾಗಿ ಹೇಳಿಕೊಂಡಿದ್ದಾಳೆ. ನಿಯಮಾವಳಿ ಉಲ್ಲಂಘನೆ ಮಾಡಿದ್ದಕ್ಕೆ ಆಕೆಗೆ ದಂಡ ವಿಧಿಸಲಾಗಿದೆ.
ಇದೇ ರೀತಿ ಬಟರ್ ಚಿಕನ್ ತಿನ್ನಲೆಂದು ಲಾಕ್ ಡೌನ್ ನಿಯಮಾವಳಿ ಉಲ್ಲಂಘಿಸಿ ಸಿಕ್ಕಾಪಟ್ಟೆ ದೂರ ಕಾರು ಓಡಿಸಿಕೊಂಡು ಹೋಗಿದ್ದ ಮೆಲ್ಬರ್ನ್‌ನ ಮತ್ತೊಬ್ಬ ವ್ಯಕ್ತಿ $1652 ದಂಡ ಪೀಕಬೇಕಾಗಿ ಬಂದಿತ್ತು.