ಕೊರೊನಾ ವೈರಸ್ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುಖದ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಆದರೆ ಒಂದೇ ಒಂದು ಕಿವಿಯೊಂದಿಗೆ ಜನಿಸಿರುವ ಅಪರೂಪದ ಜನರಿಗೆ ಈ ಮಾಸ್ಕ್ ಹಾಕಿಕೊಳ್ಳುವುದು ಒಂದು ಸವಾಲು.
ರ‍್ಹೈಸ್ ಯಾರ್ಬ್ರೋ ಹೆಸರಿನ ಈ 20 ವರ್ಷದ ಯುವತಿಗೆ ಹುಟ್ಟುತ್ತಲೇ ಒಂದು ಕಿವಿ ಇರಲಿಲ್ಲ. ಇದೀಗ ಆಕೆ ಮಾಸ್ಕ್ ಧರಿಸಿಕೊಳ್ಳಲು ಹೊಸ ಆವಿಷ್ಕಾರೀ ತಂತ್ರವೊಂದನ್ನು ಕಂಡುಕೊಂಡಿದ್ದಾರೆ.
ತನ್ನ ಮುಖದ ಒಂದು ಬದಿಗೆ ಪಾಪ್ ಸಾಕೆಟ್ ಹಾಕಿಕೊಂಡು, ಕಿವಿಯ ಜಾಗದಲ್ಲಿ ಕೃತಕವಾದ ಸಪೋರ್ಟ್ ಒಂದನ್ನು ಮಾಡಿಕೊಂಡು ಅದಕ್ಕೆ ಮಾಸ್ಕ್ ಅನ್ನು ನೇತು ಹಾಕಿಕೊಳ್ಳುವುದು ಹೇಗೆ ಎಂದು ತೋರಿಸುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
https://twitter.com/creepyposta/status/1292315021054099458?ref_src=twsrc%5Etfw%7Ctwcamp%5Etweetembed%7Ctwterm%5E1292315021054099458%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fwoman-born-with-one-ear-uses-popsocket-to-wear-face-mask-video-goes-viral-watch%2F639515