alex Certify ಜೇನುಹುಳದ ರಾಶಿ ಮಧ್ಯೆ ಆರಾಮಾಗಿ ಕೂತ ಮಹಿಳೆ: ಶಾಕ್ ಆದ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇನುಹುಳದ ರಾಶಿ ಮಧ್ಯೆ ಆರಾಮಾಗಿ ಕೂತ ಮಹಿಳೆ: ಶಾಕ್ ಆದ ನೆಟ್ಟಿಗರು..!

ಒಂದು ಜೇನುಹುಳ ಕಚ್ತು ಅಂದರೆ ಜೀವಾನೇ ಹೋದಂಗೆ ಆಗುತ್ತೆ. ಅಂತದ್ರಲ್ಲಿ ಜೇನುಗಳ ಹಿಂಡಿನ ಜೊತೆಯೇ ನಿಮ್ಮನ್ನ ಬಿಟ್ಟರೆ ಕಥೆ ಏನಾಗಬೇಡ..? ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡೋಕೆ ಕಾರಣ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ಈ ಫೋಟೋ.

ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡ್ತಿರುವ ಈ ಫೋಟೋದಲ್ಲಿ ಮಹಿಳೆಯೊಬ್ಬಳು ಕಾರು ಚಲಾಯಿಸಿಕೊಂಡು ಹೋಗ್ತಿದ್ರೆ ಕಾರಿನ ತುಂಬೆಲ್ಲ ಜೇನುಹುಳ ತುಂಬಿರೋದನ್ನ ನೀವು ಕಾಣಬಹುದಾಗಿದೆ.

ಜೋಸೆಲಿನ್ ಜೋರ್ಡಾನ್ ಎಂಬವರು ಈ ಫೋಟೋವನ್ನ ಕ್ಲಿಕ್ಕಿಸಿದ್ದಾರೆ. ಈಕೆ ಅಮೆರಿಕದ ಅಲಬಮಾ ಎಂಬಲ್ಲಿ ಮಾರ್ಚ್​ 19ನೇ ತಾರೀಖಿನಂದು ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾಳೆ.

ಫೋಟೋದಲ್ಲಿ ಮರದ ಪೆಟ್ಟಿಗೆಯೊಂದನ್ನ ಹಿಂಬದಿ ಸೀಟಿನಲ್ಲಿ ಇರಿಸಿರೋದನ್ನ ಕಾಣಬಹುದಾಗಿದೆ. ಸಾವಿರಾರು ಜೇನುಹುಳುಗಳು ಕಾರಿನ ಒಳಗಡೆ ಕುಳಿತಿವೆ. ಆದರೆ ಕಾರಿನೊಳಗಿದ್ದ ಮಹಿಳೆ ಮಾತ್ರ ಜೇನುಹುಳುಗಳಿಗೆ ಕಿಂಚಿತ್ತೂ ಹೆದರಿಕೊಳ್ಳದೇ ಸೌಮ್ಯವಾಗಿ ಕುಳಿತಿದ್ದಾಳೆ. ಜೇನುಹುಳಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮಹಿಳೆ ಆರಾಮಾಗಿ ಫೋನಿನಲ್ಲಿ ಮಾತನಾಡುತ್ತಿದ್ದಾಳೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...