ಸುದ್ದಿ ಮಾಡಲು, ಥರಾವರಿ ವಿಶ್ವದಾಖಲೆ ನಿರ್ಮಿಸಲು ಏನೇನೋ ಚಿತ್ರವಿಚಿತ್ರ ಕೆಲಸಗಳನ್ನು ಮಾಡುವ ಸಾಕಷ್ಟು ಜನರನ್ನು ನೋಡುತ್ತಲೇ ಇರುತ್ತೇವೆ. ಲಿಯಾ ಶಟ್ಕೆವರ್ ಹೆಸರಿನ ಬ್ರಿಟಿಷ್ ಯುವತಿಯೊಬ್ಬರು ಕೇವಲ ಮೂರು ನಿಮಿಷಗಳಲ್ಲಿ 10 ಜಾಮ್ ಡೋನಟ್‌ಗಳನ್ನು ತಿಂದು ಹಾಕುವ ಮೂಲಕ ಗಿನ್ನೆಸ್ ವಿಶ್ವದಾಖಲೆಯ ಪುಸ್ತಕ ಸೇರಿದ್ದಾರೆ.
ಬರ್ಮಿಂಗ್‌ಹ್ಯಾಮ್ ನಿವಾಸಿಯಾದ ಲಿಯಾ ಎರಡು ಪ್ಲೇಟ್ ಗಳಲ್ಲಿ ಹತ್ತು ಜಾಮ್ ಡೋನಟ್‌ಗಳನ್ನು ತಮ್ಮ ಮುಂದೆ ಇಟ್ಟುಕೊಂಡು, ಟೈಮರ್ ಸೆಟ್ ಮಾಡಿಕೊಂಡು ಕೇವಲ ಮೂರು ನಿಮಿಷಗಳಲ್ಲಿ ತಿಂದು ತೇಗಿದ್ದಾರೆ. ಇಷ್ಟೂ ಅವಧಿಯಲ್ಲಿ ಅವರು ಒಂದೇ ಒಂದು ಬಾರಿ ತಮ್ಮ ತುಟಿಗಳ ಮೇಲಿದ್ದ ಜಾಮ್ ಅನ್ನು ನೆಕ್ಕಿಕೊಳ್ಳಲಿಲ್ಲ. ಗಿನ್ನೆಸ್ ವಿಶ್ವದಾಖಲೆಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.