ಅಮೆರಿಕದಲ್ಲಿ ಜುಲೈ 4ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಅವರಿಗೆ ಬಹಳ ಸಂತಸ ಹಾಗೂ ಎಂಜಾಯ್ ಮಾಡುವ ದಿನವೆಂದು ಪರಿಗಣಿಸಿ ಖುಷಿಯ ಉತ್ತುಂಗವನ್ನು ಅನುಭವಿಸುತ್ತಾರೆ. ಹೀಗೆ ಸಾಹಸ ಮಾಡಲು ಹೋಗಿ ಮಹಿಳೆಯೊಬ್ಬಳು ಮೇಲ್ಚಾವಣಿಯಿಂದ ಹಾರಿ ಎಡವಟ್ಟು ಮಾಡಿಕೊಂಡಿದ್ದು, ಸ್ವಲ್ಪದರಲ್ಲೇ ದೊಡ್ಡ ಅಪಾಯದಿಂದ ಪಾರಾಗಿದ್ದಾಳೆ.
ಆ ದಿನದಂದು ಎಲ್ಲರೂ ಕುಡಿದು, ತಿಂದು ಬೇಕಾದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಹಾಗಾಗಿ ಮಹಿಳೆಯೊಬ್ಬಳು ತನ್ನ ಪತಿ ಜೊತೆ ಮನೆಯ ಮೇಲ್ಚಾವಣಿಗೆ ಹೋಗಿ ಅಲ್ಲಿಂದ ಸ್ವಿಮ್ಮಿಂಗ್ ಪೂಲ್ ಗೆ ಜಿಗಿದಿದ್ದಾಳೆ. ಪತಿಯೇನೋ ಸರಿಯಾಗಿ ಸ್ವಿಮ್ಮಿಂಗ್ ಪೂಲ್ ಒಳಗೆ ಬಿದ್ದರೆ ಈಕೆ ಸ್ವಲ್ಪ ಅಂದಾಜು ತಪ್ಪಿ ದಡದ ಮೇಲೆ ಬಿದ್ದುಬಿಡುತ್ತಾಳೆ.
ತಕ್ಷಣ ಆ ಮಹಿಳೆಗೆ ಏನಾಗಿದೆ ಎಂದು ಗೊತ್ತಾಗದಿದ್ದರೂ ಅಲ್ಲಿಂದ ಎದ್ದು ಸಂಬಾಳಿಸಿಕೊಂಡಿದ್ದಾಳೆ. ನಾವು ಎಷ್ಟೇ ಬುದ್ಧಿವಂತರಿದ್ದರೂ ಕೆಲವೊಮ್ಮೆ ಅಂದಾಜು ತಪ್ಪುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಸಂದೇಶವನ್ನು ಈ ವಿಡಿಯೋ ಕೊಡುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?time_continue=2&v=xO4Fka9AMXY&feature=emb_logo