ಹಳದಿ ಬೆಕ್ಕು ಇಂಟರ್ನೆಟ್ ನಲ್ಲಿ ಸುದ್ದಿ ಮಾಡ್ತಿದೆ. ಹಳದಿ ಬಣ್ಣದ ಬೆಕ್ಕಾ ಎಂದು ಪ್ರಶ್ನೆ ಮಾಡ್ಬೇಡಿ. ಬೆಕ್ಕಿಗೆ ಈ ಬಣ್ಣ ಬಂದಿದ್ದು ನೈಸರ್ಗಿಕವಾಗಿಯಲ್ಲ. ಬೆಕ್ಕಿನ ದೇಹದ ಮೇಲೆ ಗಾಯವಾಗಿತ್ತಂತೆ.ಅದನ್ನು ಹೋಗಲಾಡಿಸಲು ಅರಿಶಿನ ಹಚ್ಚಲಾಗಿದೆ.
ಲಾಡ್ಬಿಬಲ್ ಪ್ರಕಾರ, ಪ್ರೀತಿಯ ಸಾಕು ಬೆಕ್ಕಿನ ಅಂಗದ ಮೇಲೆ ಶಿಲೀಂಧ್ರಗಳ ಸೋಂಕು ಕಂಡಿದೆ. ಇದನ್ನು ಗಮನಿಸಿದ ಥೈಲ್ಯಾಂಡ್ ನಿವಾಸಿ ಸುಪಮಾಸ್ ಆತಂಕಕ್ಕೊಳಗಾಗಿದ್ದ. ಸೋಂಕಿಗೆ ಚಿಕಿತ್ಸೆ ನೀಡಲು ಬಿಳಿ ಬೆಕ್ಕಿನ ಮೇಲೆ ಅರಿಶಿನ ಸ್ಕ್ರಬ್ ಹಾಕಿದ್ದಾರೆ. ಅರಿಶಿನ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಇದು ಸುಲಭವಾದ ಕಲೆಗಳನ್ನು ತೆಗೆದು ಹಾಕಬಲ್ಲದು.
ಬಿಳಿ ಬೆಕ್ಕಿನ ಬಣ್ಣ ಈಗ ಹಳದಿಯಾಗಿದೆ. ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದಕ್ಕೆ ಲಕ್ಷಾಂತರ ಲೈಕ್ ಸಿಕ್ಕಿದೆ. ಬೆಕ್ಕಿಗೆ ಬಣ್ಣ ಬಳಿದು ಮತ್ತಷ್ಟು ಸುಂದರಗೊಳಿಸಿ ಡಿಜಿಟಲ್ ಫೋಟೋಗಳನ್ನು ಲಾಡ್ಬಿಬಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
https://www.facebook.com/permalink.php?story_fbid=108919770933254&id=107740711051160