ಮಾರ್ಕ್ಸ್ & ಸ್ಪೆನ್ಸರ್ ಮಳಿಗೆಗೆ ಭೇಟಿ ನೀಡಿದ್ದ ಲಂಡನ್ನ ಮಹಿಳೆಯೊಬ್ಬರು ಬಾಳೆಹಣ್ಣನ್ನ ಖರೀದಿ ಮಾಡಿದ್ದರು. ಆದರೆ ಈ ಬಾಳೆಹಣ್ಣಿಗೆ 1.6 ಲಕ್ಷ ರೂಪಾಯಿ ಬಿಲ್ ಮಾಡಲಾಗಿದ್ದು, ಇದನ್ನ ಕಂಡ ಮಹಿಳೆ ಶಾಕ್ ಆಗಿದ್ದಾರೆ.
ಸಿಂಬ್ರೆ ಬಾರ್ನ್ಸ್ ಎಂಬ ಮಹಿಳೆ ದಾರಿ ಮಧ್ಯದಲ್ಲೇ ಇದ್ದ ಎಂ & ಎಸ್ ಮಳಿಗೆಗೆ ಭೇಟಿ ನೀಡಿದ್ದರು. ಹಾಗೂ ಕೇವಲ 86.56 ರೂಪಾಯಿ ಮೌಲ್ಯದ ಬಾಳೆಹಣ್ಣುಗಳನ್ನ ಖರೀದಿ ಮಾಡಿದ್ದರು.
ಆಕೆ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಇದ್ದ ಕಾರಣ ರಶೀದಿಯ ಕಡೆಗೆ ಗಮನ ಹರಿಸಿರಲಿಲ್ಲ. ಆಪಲ್ ಪೇ ಮೂಲಕ ಹಣವನ್ನ ಪಾವತಿ ಮಾಡಿದ್ದಾರೆ.
ಆದರೆ ಬಳಿಕ ಆಕೆಗೆ ತನ್ನ ಖಾತೆಯಿಂದ ಬರೋಬ್ಬರಿ 1.6 ಲಕ್ಷ ರೂಪಾಯಿ ಹಣ ಪಾವತಿಯಾಗಿರೋದನ್ನ ಗಮನಿಸಿದ್ದಾಳೆ. ಆದರೆ ಎಂ & ಎಸ್ ಮಳಿಗೆ ಹಣವನ್ನ ಮರುಪಾವತಿ ಮಾಡೋಕೆ ಆಗಲ್ಲ ಎಂದು ಹೇಳಿದ ಬಳಿಕ ಮಹಿಳೆ ಇನ್ನಷ್ಟು ಶಾಕ್ ಆಗಿದ್ದಾರೆ . 45 ನಿಮಿಷಗಳ ಕಾಲ ನಡೆದುಕೊಂಡು ಹೋಗಿ ಅಂಗಡಿಯನ್ನ ತಲುಪಿದ್ದಾರೆ.
ನಾನು ಕೆಲಸಕ್ಕೆ ಹೋಗುವ ಧಾವಂತದಲ್ಲಿ ಇದ್ದ ಕಾರಣ ನಾನು ರಶೀದಿಯನ್ನ ಗಮನಿಸಿಯೇ ಇರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಪಾವತಿಯಲ್ಲಿ ತಾಂತ್ರಿಕ ದೋಷವಾಗಿದ್ದರಿಂದ ಈ ಪ್ರಮಾದವಾಗಿದೆ ಎಂದು ಅಂಗಡಿಯ ವಕ್ತಾರ ಹೇಳಿದ್ದಾರೆ. ಮಹಿಳೆಗೆ ಮರುಪಾವತಿ ಮಾಡಲು ಎಂ & ಎಸ್ ಮಳಿಗೆ ಮುಂದಿನ ಕ್ರಮಗಳನ್ನ ಕೈಗೊಳ್ಳುತ್ತಿದೆ.