ಫ್ರಾನ್ಸ್ ಹಾಗೂ ಜರ್ಮನಿ ಕೊರೊನಾ ವೈರಸ್ ನಿಯಂತ್ರಿಸಲು ಮತ್ತೊಮ್ಮೆ ಲಾಕ್ಡೌನ್ ತಂತ್ರದ ಮೊರೆ ಹೋಗಿದೆ. ಯು.ಎಸ್.ನಲ್ಲಂತೂ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಆದರೆ ಇದೆಲ್ಲರದ ನಡುವೆ ತೈವಾನ್ ಮಾತ್ರ ಕೊರೊನಾ ವಿಚಾರದಲ್ಲಿ ಹೊಸ ದಾಖಲೆಯನ್ನ ಸೃಷ್ಟಿಸಿದೆ.
ಬರೋಬ್ಬರಿ 200 ದಿನಗಳವರೆಗೆ ಯಾವುದೇ ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿಲ್ಲ. ತೈವಾನ್ನಲ್ಲಿ ಏಪ್ರಿಲ್ 12ರಂದು ಕೊನೆಯ ಸ್ಥಳೀಯ ಕೊರೊನಾ ಪ್ರಕರಣ ದಾಖಲಾಗಿತ್ತು. ಶುಕ್ರವಾರಕ್ಕೆ ಯಾವುದೇ ಕೊರೊನಾ ಪ್ರಕರಣಗಳಿಲ್ಲದೇ ತೈವಾನ್ 201 ದಿನಗಳನ್ನ ಪೂರೈಸಿದೆ.
23 ಮಿಲಿಯನ್ ಜನಸಂಖ್ಯೆ ಹೊಂದಿರುವ ಈ ದ್ವೀಪರಾಷ್ಟ್ರ 553 ಕೊರೊನಾ ಪ್ರಕರಣಗಳನ್ನ ದಾಖಲು ಮಾಡಿತ್ತು. ಈ ವೇಳೆಗಾಗಲೇ 7 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ರು. ಕೂಡಲೇ ಅಲರ್ಟ್ ಆದ ತೈವಾನ್ ರಾಷ್ಟ್ರ ಗಡಿಗಳನ್ನ ಸೀಲ್ ಮಾಡೋದ್ರ ಮೂಲಕ ಫೇಸ್ ಮಾಸ್ಕ್, ಸಾಮಾಜಿಕ ಅಂತರವನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ವಿಶ್ವದಲ್ಲೇ ಹೊಸ ದಾಖಲೆ ಬರೆದಿದೆ.