ಕೀನ್ಯಾದ ಶೆಲ್ಡ್ರಿಕ್ ವನ್ಯಜೀವಿ ತಾಣದಲ್ಲಿ ಅನಾಥ ಜೀಬ್ರಾ ಸಖ್ಯ ಬೆಳೆಸಲು ಅಲ್ಲಿನ ವನ್ಯಜೀವಿ ಪಾಲಕರ ಗುಂಪು ಜೀಬ್ರಾ ಮೈಬಣ್ಣ ಹೋಲುವ ಕಪ್ಪು ಮತ್ತು ಬಿಳಿ ಪಟ್ಟೆಯ ಬಟ್ಟೆ ಧರಿಸಿ ಹೊಸ ಪ್ರಯೋಗ ಮಾಡಿದ್ದಾರೆ.
ಜೀಬ್ರಾ ಮೈಬಣ್ಣದ ಬಟ್ಟೆಯನ್ನು ಮುಂಜಾನೆಯಿಂದ ಸಂಜೆಯವರೆಗೂ ಧರಿಸುವ ವನ್ಯಜೀವಿ ಪಾಲಕರು ಜೀಬ್ರಾಗೆ ಅನಾಥಪ್ರಜ್ಞೆ ಕಾಡಬಾರದೆಂದು ಪ್ರಯತ್ನಿಸುತ್ತಾರೆ. ಒಂದು ರೀತಿಯಲ್ಲಿ ಬಾಡಿಗೆ ತಾಯಿ ರೀತಿ ಪಾತ್ರ ವಹಿಸುತ್ತಾರೆ.
ಸಾವೊ ಈಸ್ಟ್ ನ್ಯಾಷನಲ್ ಪಾರ್ಕ್ ನಲ್ಲಿ ಜೀಬ್ರಾವೊಂದು ಸಿಂಹ ಕೊಂದಿತ್ತು. ಮೃತ ಜೀಬ್ರಾದ ಮರಿ ಅನಾಥವಾಗಿತ್ತು. ಮೊದಲು ಅದನ್ನು ಸ್ಥಳೀಯ ದನಗಾಹಿಗಳು ನೋಡಿಕೊಳ್ಳುತ್ತಿದ್ದರಂತೆ. ಬಳಿಕ ವನ್ಯ ಜೀವಿ ಪಾಲಕರು ಅದನ್ನು ರಕ್ಷಿಸಿ ಆರೈಕೆ ಮಾಡುತ್ತಿದ್ದಾರೆ.
ಜೀಬ್ರಾ ಮರಿಗಳು ತಮ್ಮ ತಾಯಿಯೊಂದಿಗೆ ಬಲವಾದ ಸಂಬಂಧ ಹೊಂದಿರುತ್ತದೆ. ತಾಯಿಯ ಅನುಪಸ್ಥಿತಿಯಿಂದ ಮರಿಗೆ ಅನಾಥಪ್ರಜ್ಞೆ ಮೂಡಬಾರದೆಂದು ವನ್ಯಜೀವಿ ಪಾಲಕರು ಜೀಬ್ರಾ ಬಣ್ಣದ ಬಟ್ಟೆ ತೊಟ್ಟು ಆ ಮರಿಯೊಂದಿಗೆ ದಿನ ಕಳೆಯುತ್ತಿದ್ದಾರೆ. ಹಾಲುಣಿಸಿ ತಾಯಿಯಂತೆಯೇ ಆರೈಕೆ ಮಾಡುತ್ತಿದ್ದಾರೆ.
https://www.facebook.com/SheldrickTrust/posts/10158520452164889