
ವನ್ಯಜೀವಿ ಛಾಯಾಗ್ರಾಹಕರೊಬ್ಬರು ಕೆಲ ಪ್ರಾಣಿಗಳ ಫೋಟೋ ತಗೆಯಲೆಂದು ನೇತು ಹಾಕಿದ್ದ ಕ್ಯಾಮರಾಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕಾಡಿನಲ್ಲಿ ಫೋಸ್ ನೀಡಿರುವ ಫೋಟೋ ವೈರಲ್ ಆಗಿದೆ.
ಹೌದು, ವಾಷಿಂಗ್ಟನ್ ಮೂಲದ ಜೆಫ್ ವಿರ್ತ್ ಎನ್ನುವ ವನ್ಯ ಮೃಗ ಛಾಯಾಗ್ರಾಹಕ, ರೆಕ್ಕೂನ್, ಬಾಬ್ ಕ್ಯಾಟ್ ಸೇರಿದಂತೆ ವಿವಿಧ ಪ್ರಾಣಿಗಳ ಫೋಟೋ ತೆಗೆಯಲು ಮರದ ಕೊಂಬೆಯೊಂದಕ್ಕೆ ಕ್ಯಾಮರಾ ಅಳವಡಿಸಿದ್ದಾರೆ.
ಈ ವೇಳೆ ಕೆಲ ಪ್ರಾಣಿಗಳ ಫೋಟೋಸಿಕ್ಕಿವೆ. ಆದರೆ ಇನ್ನಷ್ಟು ಫೋಟೋ ಸಿಗಲಿ ಎಂದು ಕ್ಯಾಮರಾವನ್ನು ಬಿಟ್ಟಾಗ ಕಾಡಿಗೆ ಬಂದ ವ್ಯಕ್ತಿಯೊಬ್ಬ ಫೋಸ್ ನೀಡಿರುವ ಫೋಟೋ ವೈರಲ್ ಆಗಿದೆ.
ಮರದ ದಿಮ್ಮೆಯ ಮೇಲೆ ಪೋಸ್ ನೀಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಜೆಫ್ ಹಾಕಿಕೊಂಡಿದ್ದಾನೆ. ಕ್ಯಾಮರಾಗೆ ಫೋಸ್ ಕೊಡಲು ಅಂಜಿಕೊಳ್ಳದ ಆ ವ್ಯಕ್ತಿಯ ಧೈರ್ಯವನ್ನು ನೆಟ್ಟಿಗರು ಮೆಚ್ಚಿದ್ದಾರೆ.
https://www.instagram.com/p/CDaPEn8jLy5/?utm_source=ig_embed