ಪ್ರೀತಿ ಪಾತ್ರರ ಜೊತೆಗಿರಲು ಕೆಲವೊಮ್ಮೆ ಕಷ್ಟದ ಕೆಲಸಗಳನ್ನೂ ಸಹ ಭಾರೀ ಇಷ್ಟಪಟ್ಟು ಮಾಡಿಬಿಡುತ್ತೇವೆ. ಕೊರೊನಾ ಸಾಂಕ್ರಮಿಕದ ಕಾರಣ ಜನರ ತಂತಮ್ಮ ಪ್ರೀತಿಪಾತ್ರರನ್ನು ತಿಂಗಳುಗಳ ಕಾಲ ನೋಡದೇ ಇರಬೇಕಾಗಿ ಬಂದಿದೆ.
ಫ್ಲಾರಿಡಾದ ಫೋರ್ಟ್ ಲಾಡರ್‌ಡೇಲ್‌ನಲ್ಲಿ ಹಿರಿಯ ದಂಪತಿಗಳಿಬ್ಬರ ಸ್ಟೋರಿ ಬಹಳ ಗಮನ ಸೆಳೆಯುತ್ತಿದೆ. ಸ್ಟೀವ್‌ರ ನರ್ಸಿಂಗ್ ಹೋಂಗೆ ಯಾವುದೇ ವಿಸಿಟರ್‌ಗಳನ್ನು ಬಾರದಂತೆ ಮಾಡುವ ಮೂಲಕ ಕೋವಿಡ್ ವೈರಾಣು ಹಬ್ಬದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು.
ಆದರೆ ತಮ್ಮ ಪತಿಯನ್ನು ಕಾಣದೇ 114 ದಿನಗಳಾಗಿದ್ದ ಕಾರಣ, ವಿರಹ ವೇದನೆ ತಾಳಲಾರದ ಸ್ಟೀವ್ ಪತ್ನಿ ಮೇರಿ ಡೇನಿಯಲ್, ಇದೇ ನರ್ಸಿಂಗ್ ಹೋಂನಲ್ಲಿ ಸ್ವಯಂ ಸೇವಕಿಯಾಗಿ ಬಂದು ಅಲ್ಲಿ ಪಾತ್ರೆ ತೊಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಇಬ್ಬರದ್ದು 24 ವರ್ಷಗಳ ಅನ್ಯೋನ್ಯ ದಾಂಪತ್ಯ. ಈ ಮೂಲಕ ವಾರಕ್ಕೆ ಎರಡು ಬಾರಿ ಈ ಆಸ್ಪತ್ರೆಗೆ ಬಂದು ಕೆಲಸ ಮಾಡುವ ಮೂಲಕ ತನ್ನ ಪತಿಯನ್ನು ಭೇಟಿ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ ಮೇರಿ.