ಹುಟ್ಟುಹಬ್ಬ, ಮದುವೆ ಹಾಗೂ ಇನ್ನಿತರ ವಿಶೇಷ ಸಮಾರಂಭಗಳಿಗೆ ತಯಾರಿಸುವ ಕೇಕ್‌ಗಳು ಒಮ್ಮೊಮ್ಮೆ ಅವುಗಳ ಮೇಲೆ ಬರೆದಿರುವ ಪದಗಳ ಸ್ಪೆಲ್ಲಿಂಗ್ ತಪ್ಪಿನಿಂದ ಸಂಭ್ರಮವನ್ನು ಸ್ವಲ್ಪ ಡಲ್ ಮಾಡುತ್ತವೆ. ಆದರೆ, ಇಲ್ಲೊಂದು ಕೇಕ್ ಮೇಲೆ ಭಯಂಕರವಾದ ಎರರ್ ಒಂದನ್ನು ಕೆತ್ತಲಾಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ.
ಮದುವೆ ಸಮಾರಂಭಕ್ಕೆ ಕೇಕ್ ಮಾಡಿದ ಬೇಕರ್, “Why’s there a wedding?” ಎಂದು ಅದರ ಮೇಲೆ ಬರೆದು ಬಲೇ ಅವಾಂತರ ಮಾಡಿಬಿಟ್ಟಿದ್ದಾನೆ. ಹೋಗಿ ಹೋಗಿ ಮದುವೆ ದಿನವೇ ಈ ಥರ ಪ್ರಶ್ನೆ ಕೇಳಬೇಕೇ ಎಂದು ಈ ಚಿತ್ರವನ್ನು ನೋಡಿದ ನೆಟ್ಟಿಗರು ತಮಾಷೆ ಮಾಡಿಕೊಂಡು ಎಂಜಾಯ್ ಮಾಡಿದ್ದಾರೆ.
ವೆಡ್ಡಿಂಗ್ ಪ್ಲಾನರ್ ಒಬ್ಬರು ಈ ಫೋಟೋ ಶೇರ್ ಮಾಡಿಕೊಂಡಿದ್ದು, ತಮ್ಮ ಕ್ಲಯಂಟ್‌ಗಳು ಈ ಕೇಕ್ ಅನ್ನು ಹತ್ತಿರದ ಗ್ರಾಸರಿ ಅಂಗಡಿಯಿಂದ ಖರೀದಿಸಿ ತಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. “ಅದಕ್ಕೇ ನೋಡಿ ವೃತ್ತಿಪರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಅನ್ನೋದು” ಎಂದು ಹಾಗೇ ಪೋಕ್ ಮಾಡಿದ್ದಾರೆ ಪ್ಲಾನರ್.