ಭಾರತದಲ್ಲಿ ಇಂಗ್ಲಿಷ್ ಮಾತನಾಡಿದರೆ ಲೆವೆಲ್ಲೇ ಬೇರೆ ಎಂದು ನೋಡುವ ಮನಸ್ಥಿತಿಗಳು ಇರುವುದೂ ನಿಜ ಹಾಗೆಯೇ ಇಂಗ್ಲಿಷ್ ಭಾಷಾ ಪ್ರಯೋಗದ ವೇಳೆ ವ್ಯಾಕರಣ ದೋಷ ಕಂಡುಬಂದಲ್ಲಿ ಅದು ಭಾರೀ ನಗೆಪಾಟಲಿಗೆ ಈಡಾಗುವುದೂ ನಿಜ.
ಅನೂ’ಸ್ ಕಿಚನ್ ಹೆಸರಿನ ರೆಸ್ಟೋರಂಟ್ ಒಂದರ ಇಂಗ್ಲಿಷ್ ಜಾಹೀರಾತೊಂದರಲ್ಲಿ ಒಂದೇ ಒಂದು ಸಣ್ಣ ವ್ಯಾಕರಣ ದೋಷ ಭಾರೀ ಅಪಾರ್ಥಕ್ಕೆ ದಾರಿ ಮಾಡಿಕೊಟ್ಟಿದೆ.
ಪೂರ್ವ ಲಂಡನ್‌ನಲ್ಲಿರುವ ಈ ರೆಸ್ಟೋರಂಟ್ ತನ್ನ ಆನ್ಲೈನ್ ಹಾಗೂ ಡೆಲಿವರಿ ಸೈಟ್‌ನಲ್ಲಿ ಹಾಕಿದ ಜಾಹೀರಾತು ಬ್ರಿಟನ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪೌಲ್ ಬ್ರೂಕ್ ಹೆಸರಿನ ಫೇಸ್ಬುಕ್ ಬಳಕೆದಾರರೊಬ್ಬರು ಈ ಪ್ರಮಾದದ ಸ್ಕ್ರೀನ್ ಶಾಟ್ ತೆಗೆದುಕೊಂಡು ತಮ್ಮ ವಾಲ್‌ನಲ್ಲಿ ಹಂಚಿಕೊಂಡಿದ್ದಾರೆ. “ವ್ಯಾಕರಣ ಏಕೆ ಬಹಳ ಮುಖ್ಯ” ಎಂದು ಪೌಲ್ ಹೇಳಿಕೊಂಡಿದ್ದಾರೆ.