ನೀವು ವಿದೇಶಿ ರೆಸ್ಟಾರೆಂಟ್ಗಳಿಗೆ ಭೇಟಿ ನೀಡಿದ್ರೆ ಅಲ್ಲಿ ದೊಡ್ಡ ಗ್ಲಾಸ್ನ್ನು ನಿಂಬೆ ಹಣ್ಣಿನ ಸ್ಲೈಸ್ನಿಂದ ಅಲಂಕರಿಸಿ ಅದರಲ್ಲಿ ನೀರು ಹಾಗೂ ಐಸ್ಗಳನ್ನ ಹಾಕಿ ಗ್ರಾಹಕರಿಗೆ ಸರ್ವ್ ಮಾಡೋ ಬಗೆ ನಿಮಗೆ ತಿಳಿದಿರುತ್ತೆ. ಆದರೆ ಜಪಾನ್ನ ರೆಸ್ಟಾರೆಂಟ್ಗಳಲ್ಲಿ ಮಾತ್ರ ನಿಮಗೆ ಅತಿ ಚಿಕ್ಕ ಕಪ್ನಲ್ಲಿ ನೀರನ್ನ ಕೊಡುತ್ತಾರೆ. ಊಟದ ವೇಳೆ ನೀರು ಸೇವಿಸಿದ್ರೆ ಜೀರ್ಣಕ್ರಿಯೆಗೆ ಅಪಾಯಕಾರಿ ಅನ್ನೋದು ಜಪಾನಿಗರ ನಂಬಿಕೆಯಾಗಿದೆ.
ಊಟ ಮಾಡುವ ವೇಳೆಯಲ್ಲಿ ಅನೇಕರು ಗಂಟಲಿಗೆ ಆಹಾರ ಸಿಗಬಾರದು ಅಂತಾ ನೀರನ್ನ ಸೇವಿಸ್ತಾರೆ. ಆದರೆ ಊಟದ ನಡುವೆ ನೀರು ಸೇವನೆ ಒಳ್ಳೆಯದಲ್ಲ ಅನ್ನೋದು ಜಪಾನಿಗರ ನಂಬಿಕೆಯಾಗಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ.
ಇದು ಕೇಳೋಕೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ ಊಟದ ವೇಳೆಯಲ್ಲಿ ನೀರು ಸೇವನೆ ಮಾಡೋದ್ರಿಂದ ಬಾಯಿ ಹೆಚ್ಚು ಹೆಚ್ಚು ಒಣಗುತ್ತದೆಯಂತೆ. ಅದರಲ್ಲೂ ನಿಂಬೆಯ ತುಂಡನ್ನ ನೀರಿನಲ್ಲಿ ಹಾಕಿ ಕುಡಿಯೋದ್ರಿಂದ ಅಪಾಯ ಇನ್ನಷ್ಟು ಹೆಚ್ಚು. ಇದು ಬಾಯಿ ವಾಸನೆಗೆ ಕಾರಣವಾಗೋದ್ರ ಜೊತೆಗೆ ಹಲ್ಲಿನ ಆರೋಗ್ಯವನ್ನೂ ಹಾಳು ಮಾಡುತ್ತದೆಯಂತೆ.
ಗೋವಾದಲ್ಲಿ ಶುರುವಾಗಿದೆ ದೇಶದ ಮೊದಲ ಸೆಕ್ಸ್ ಟಾಯ್ಸ್ ಮಳಿಗೆ
ಊಟದ ಜೊತೆಯಲ್ಲಿ ನೀರು ಸೇವನೆ ಮಾಡೋದ್ರಿಂದ ಬಾಯಿಯಲ್ಲಿ ಲಾಲಾರಸದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತೆ. ಇದರಿಂದ ದೇಹದಲ್ಲಿ ಆಹಾರ ಬೇಗನೇ ಜೀರ್ಣವಾಗೋದಿಲ್ಲ. ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತೆ.
ಊಟದ ಜೊತೆಯಲ್ಲಿ ಪಾನೀಯಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಉಂಟಾಗಬಹುದು. ದೇಹಕ್ಕೆ ಪೋಷಕಾಂಶಗಳನ್ನ ಹೀರಿಕೊಳ್ಳುವ ಶಕ್ತಿ ಕಡಿಮೆಯಾಗಬಹುದು. ಎದೆ ಉಬ್ಬರಕ್ಕೂ ಈ ಅಭ್ಯಾಸ ಕಾರಣವಾಗುವ ಸಾಧ್ಯತೆ ಇದೆ.
ಇದೆಲ್ಲದರ ಜೊತೆಗೆ ಊಟದ ಜೊತೆ ನೀರು ಕುಡಿಯೋದ್ರಿಂದ ದೇಹದ ತೂಕ ಕೂಡ ಹೆಚ್ಚಾಗುತ್ತಂತೆ. ನಿಮ್ಮ ದೇಹ ಸರಿಯಾಗಿ ಜೀರ್ಣ ಕ್ರಿಯೆ ಕೆಲಸ ಮಾಡದಿದ್ದಾಗ ಈ ಎಲ್ಲಾ ಆಹಾರಗಳು ಕೊಬ್ಬಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಸ್ಥೂಲಕಾಯ ಸಮಸ್ಯೆ ಉಂಟಾಗುತ್ತೆ.