ಕದನಪೀಡಿತ ಪ್ರದೇಶಗಳಲ್ಲಿ ಆಗುವ ದಾಳಿಗಳ ತೀವ್ರತೆ ಹಾಗೂ ವಿಧ್ವಂಸದ ಅಂದಾಜನ್ನು ಗ್ರಹಿಸಲು ಮ್ಯಾಪಿಂಗ್ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆದರೂ ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿಗಳು ಘಟಿಸಿ, ಉಪಗ್ರಹದ ಚಿತ್ರಗುಚ್ಛಗಳು ಕೊಡುವ ಚಿತ್ರಣಗಳು ನಮ್ಮ ಮುಂದೆ ಇದ್ದರೂ ಸಹ ಗಾಝಾ ಪಟ್ಟಿಯ ಉಪಗ್ರಹದ ಚಿತ್ರಗಳು ಇನ್ನೂ ಸಹ ’ಬ್ಲರ್’ ಆಗಿಯೇ ಸಿಗುತ್ತಿವೆ. ಸಾರ್ವಜನಿಕವಾಗಿ ಲಭ್ಯವಿರುವ ಚಿತ್ರಗಳಲ್ಲೂ ಗಾಝಾದ ಬೀದಿಗಳು ಬಹಳ ಅಸ್ಪಷ್ಟವಾಗಿ ಕಾಣುತ್ತವೆ.
ಇಸ್ರೇಲ್ ಹಾಗೂ ಪ್ಯಾಲಿಸ್ತೀನ್‌ನ ಬಹುತೇಕ ಪ್ರದೇಶಗಳ ಉಪಗ್ರಹಾಧರಿತವಾದ ಸ್ಪಷ್ಟವಾದ ಚಿತ್ರಗಳು ಉಪಗ್ರಹ ಕಂಪನಿಗಳ ಬಳಿ ಸಾಕಷ್ಟಿದ್ದರೂ ಸಹ ಗೂಗಲ್ ಅರ್ಥ್ ಅಪ್ಲಿಕೇಶನ್‌ನಲ್ಲಿ ಅಸ್ಪಷ್ಟವಾಗಿ ಕಾಣುತ್ತವೆ.
ʼಪೋರ್ನ್ ಸೈಟ್ʼ ನೋಡುವವರಿಗೆ ಗೂಗಲ್ ಗುಡ್ ನ್ಯೂಸ್: ಡೇಟಾ ಅಳಿಸಲು ಸರಳ ವಿಧಾನ
ಕದನಗಳ ವರದಿಗಾರಿಕೆ ಮಾಡುವಲ್ಲಿ ಉಪಗ್ರಹ ಚಿತ್ರಗಳು ಮುಖ್ಯ ಪಾತ್ರ ನಿರ್ವಹಿಸುತ್ತವೆ. ಆದರೆ ಸ್ಪಷ್ಟವಾದ ಚಿತ್ರಗಳು ಸಾರ್ವಜನಿಕವಾಗಿ ಲಭ್ಯವಾದಲ್ಲಿ ಈ ಪ್ರದೇಶದಲ್ಲಿನ ಭದ್ರತಾ ಸ್ಥಿರತೆಯನ್ನು ಹಾಳು ಮಾಡುತ್ತವೆ ಎಂಬ ಕಳಕಳಿಯೂ ದೊಡ್ಡದಾಗಿದೆ. ಇಸ್ರೇಲ್ ಹಾಗೂ ಪ್ಯಾಲಿಸ್ತೀನ್ ನಡುವೆ ಗಾಝಾ ಪಟ್ಟಿಯಲ್ಲಿ ಕದನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖಾ ಸಂಸ್ಥೆಗಳು ಕ್ಷಿಪಣಿ ದಾಳಿ ನಡೆದ ಸ್ಥಳಗಳನ್ನು ಅಧ್ಯಯನ ಮಾಡಲು ಉಪಗ್ರಹಗಳ ಚಿತ್ರಗಳನ್ನು ಅವಲಂಬಿಸಿದ್ದಾರೆ.