ಜಿನೆವಾ/ಲಂಡನ್: ಇನ್ನು ಎರಡು ವಾರಗಳಲ್ಲಿ ಕೊರೋನಾ ಲಸಿಕೆ ಫಲಿತಾಂಶ ಬರಲಿದೆ. ಲಸಿಕೆಯ ಪ್ರಯೋಗದ ಮಧ್ಯಂತರ ಫಲಿತಾಂಶ ಸಿಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಹೇಳಿದ್ದಾರೆ.
39 ದೇಶಗಳಲ್ಲಿ ಕೊರೋನಾ ಲಸಿಕೆಯ ಪ್ರಯೋಗ ಆರಂಭವಾಗಿದೆ. 39 ದೇಶಗಳ 5,500 ರೋಗಿಗಳ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಪ್ರಯೋಗ ಯಶಸ್ವಿಯಾಗುವ ಮುನ್ಸೂಚನೆ ಸಿಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಅನೇಕ ತಜ್ಞರು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಕೊವ್ಯಾಕ್ಸಿನ್ ಸೇರಿ ಕೆಲವು ಔಷಧ ಮಾನವ ಪ್ರಯೋಗಕ್ಕೆ ಅನುಮೋದನೆ ನೀಡಿದ್ದು, ಆಗಸ್ಟ್ 15 ರೊಳಗೆ ಲಸಿಕೆ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.