ಕೋವಿಡ್ ವಿಚಾರದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ ವಿಶ್ವ ಆರೋಗ್ಯ ಸಂಸ್ಥೆ 06-02-2021 6:19PM IST / No Comments / Posted In: Corona, Corona Virus News, Latest News, International ಕೊರೊನಾ ವೈರಸ್ ವಿರುದ್ಧ ಲಸಿಕೆಯ ಹೋರಾಟ ಮುಂದುವರಿಸಿರುವ ಭಾರತ ತನ್ನ ದೇಶದ ಪ್ರಜೆಗಳಿಗೆ ಲಸಿಕೆಗಳನ್ನ ನೀಡೋದ್ರ ಜೊತೆ ಜೊತೆಗೆ ಅನ್ಯ ದೇಶಗಳಿಗೂ ಲಸಿಕೆಗಳನ್ನ ಒದಗಿಸಿ ಮಾನವೀಯತೆ ಮೆರೆಯುತ್ತಿದೆ. ವಿಶ್ವಆರೋಗ್ಯ ಸಂಸ್ಥೆ ಈ ವಿಚಾರವಾಗಿ ಭಾರತದ ಮಾನವೀಯ ಮೌಲ್ಯವನ್ನ ಈ ಹಿಂದೆಯೇ ಹಾಡಿ ಹೊಗಳಿತ್ತು. ಇದೀಗ ಮತ್ತೊಂದು ವಿಚಾರದಲ್ಲಿ ಭಾರತದ ಸಾಧನೆಯನ್ನ ವಿಶ್ವ ಮಟ್ಟದಲ್ಲಿ ಕೊಂಡಾಡಿದೆ. ಕೊರೊನಾ ಮಧ್ಯೆಯೂ ಮಿಂಚುತ್ತಿರುವ ರಣವೀರ್ ಸಿಂಗ್: ಗಳಿಕೆ ಕೇಳಿದ್ರೆ ತಿರುಗುತ್ತೆ ತಲೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಟೆಡ್ರೋಸ್ ಎಡ್ನಾಂ ಘೋಬಿಯಸ್ ಈ ವಿಚಾರವಾಗಿ ಮಾತನಾಡಿ, ಕೊರೊನಾ ವೈರಸ್ ನಿಯಂತ್ರಣದ ವಿಚಾರದಲ್ಲಿ ಭಾರತ ಅತ್ಯುತ್ತಮ ಅಭಿವೃದ್ಧಿಯನ್ನ ಪ್ರದರ್ಶಿಸಿದೆ. ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಂಡ್ರೆ ಲಸಿಕೆಯನ್ನ ಬಳಕೆಯ ಜೊತೆಗೆ ಸೂಕ್ತ ಕ್ರಮಗಳ ಮೂಲಕ ನಾವು ಈ ವೈರಸ್ನ್ನ ನಿಯಂತ್ರಿಸಬಹುದಾಗಿದೆ ಎಂಬ ವಿಚಾರ ಸಾಬೀತಾಗುತ್ತೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನ ವಿಶ್ವ ಆರೋಗ್ಯ ಸಂಸ್ಥೆ ನಿರೀಕ್ಷಿಸಲಿದೆ ಎಂದು ಹೇಳಿದ್ರು. India 🇮🇳 has shown great progress in significantly driving down the number of #COVID19 cases, says @DrTedros. "This shows us that if we can do these simple public health solutions, we can beat the virus…With vaccines being added, we would even expect more and better outcomes." pic.twitter.com/T1pgVi67tm — Global Health Strategies (@GHS) February 5, 2021