ವಿಶ್ವದಾದ್ಯಂತ ಕೊರೊನಾ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ರಷ್ಯಾ ಖುಷಿ ಸುದ್ದಿಯೊಂದನ್ನು ನೀಡಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಕೊರೊನಾ ಲಸಿಕೆ ಹೊರ ತರುವುದಾಗಿ ರಷ್ಯಾ ಹೇಳಿದೆ. ಆದ್ರೆ ರಷ್ಯಾದ ಈ ಹೇಳಿಕೆ ಬಗ್ಗೆ ಡಬ್ಲ್ಯುಎಚ್‌ಒ ಅನುಮಾನ ವ್ಯಕ್ತಪಡಿಸಿದೆ.
ಲಸಿಕೆ ತಯಾರಿಸಲು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ರಷ್ಯಾ ಅನುಸರಿಸಿಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಈ ಲಸಿಕೆಯ ಯಶಸ್ಸನ್ನು ನಂಬುವುದು ಕಷ್ಟವೆಂದು ಅದು ಅನುಮಾನ ವ್ಯಕ್ತಪಡಿಸಿದೆ.
ರಷ್ಯಾ ಮೂರನೇ ಹಂತದ ಪ್ರಯೋಗವಿಲ್ಲದೆ ಲಸಿಕೆ ನೀಡಲು ಮುಂದಾಗಿದೆ. ಇದು ಅಪಾಯಕಾರಿ ಎಂದು ಡಬ್ಲ್ಯುಎಚ್ ಒ ಹೇಳಿದೆ. ರಷ್ಯಾ ಲಸಿಕೆ ಕಬಗ್ಗೆ ಆರಂಭದಿಂದಲೂ ಹೆಚ್ಚಿನ ಮಾಹಿತಿ ನೀಡಿಲ್ಲ. ಏಕಾಏಕಿ ಅಕ್ಟೋಬರ್ ಮೊದಲ ವಾರದಲ್ಲಿ ಲಸಿಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದು ಸಂಶೋಧಕರಲ್ಲಿ ಅನುಮಾನ ಮೂಡಿಸಿದೆ. ಸರಿಯಾದ ಪರೀಕ್ಷೆ ನಡೆಸದೆ ರಷ್ಯಾ ಲಸಿಕೆ ಹೊರಗೆ ತರ್ತಿದೆ. ಇದ್ರಿಂದ ಮುಂದೆ ಲಸಿಕೆ ಅಡ್ಡಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಡಬ್ಲ್ಯುಎಚ್ ಒ ಹೇಳಿದೆ.