ನಿಕರಾಗುವಾ ಮೃಗಾಲಯದಲ್ಲಿ ಜನಿಸಿದ ಅಪರೂಪದ ಬಿಳಿ ಹುಲಿ ಮರಿಯನ್ನ ಅದರ ತಾಯಿ ತಿರಸ್ಕರಿಸಿದ ಬಳಿಕ ಮೃಗಾಲಯ ಸಿಬ್ಬಂದಿಯೇ ಹುಲಿ ಮರಿಯನ್ನ ಪೋಷಿಸುತ್ತಿದ್ದಾರೆ. ಕಳೆದ ವಾರ ಜನಿಸಿದ ಈ ಬಿಳಿ ಹುಲಿ ಮರಿ ಕೇವಲ ಒಂದು 1 ಕೆಜಿ ತೂಕವನ್ನ ಹೊಂದಿತ್ತು ಎಂದು ಎಎಫ್ಪಿ ವರದಿ ಮಾಡಿತ್ತು.
ಹುಲಿಗಳ ಜೀನ್ಗಳಲ್ಲಿನ ಸಮಸ್ಯೆಯಿಂದಾಗಿ ಈ ರೀತಿಯ ಬಿಳಿ ಬಣ್ಣದ ಹುಲಿಗಳು ಜನಿಸುತ್ತವೆ. ಅಂದಹಾಗೆ ಕಪ್ಪು ಹಾಗೂ ಹಳದಿ ಬಣ್ಣದ ಹುಲಿ ಜೋಡಿಗೆ ನಿಕರಾಗುವ ಮೃಗಾಲಯದಲ್ಲಿ ಜನಿಸಿದ ಮೊದಲ ಬಿಳಿ ಹುಲಿ ಮರಿ ಇದಾಗಿದೆ.
ಆದರೆ ಈ ಹುಲಿ ಮರಿಯ ತಾಯಿ ಇದನ್ನ ತಿರಸ್ಕರಿಸಿದ ಕಾರಣ ಮೃಗಾಲಯದ ಸಿಬ್ಬಂದಿಯೇ ಇದರ ಕಾಳಜಿ ವಹಿಸುತ್ತಿದ್ದಾರೆ. ಮೃಗಾಲಯದ ನಿರ್ದೇಶಕರ ಪತ್ನಿ ಮರೀನಾ ಅರ್ಗುಲ್ಲೋ ಆಹಾರವನ್ನ ನೀಡುತ್ತಾರೆ.