
ಕೆನಡಾದ ಬಾಹ್ಯಾಕಾಶ ಸಂಸ್ಥೆ ಈ ವಿಡಿಯೋವನ್ನ ಶೇರ್ ಮಾಡಿದ್ದು ಇದರಲ್ಲಿ ಗಗನಯಾತ್ರಿ ಡೇವಿಡ್ ಸೆಂಟರ್ ಜಾಕ್ವೆಸ್ ಜೇನುತುಪ್ಪ ಬಾಹ್ಯಾಕಾಶದಲ್ಲಿ ಯಾವ ರೀತಿ ವರ್ತಿಸುತ್ತೆ ಅನ್ನೋದನ್ನ ತೋರಿಸಿದ್ದಾರೆ.
ಶೂನ್ಯ ಗುರುತ್ವಾಕರ್ಷಣೆಯಲ್ಲಿ ಜೇನುತುಪ್ಪ ವಿಚಿತ್ರವಾಗಿ ವರ್ತಿಸುತ್ತೆ ಅಂತಾ ಗಗನಯಾತ್ರಿ ವಿಡಿಯೋದ ಪ್ರಾರಂಭದಲ್ಲಿ ಹೇಳುತ್ತಾರೆ. ಬಳಿಕ ಜೇನುತುಪ್ಪದ ಮುಚ್ಚಳವನ್ನ ತೆರೆಯುತ್ತಾರೆ.
ಈ ವೇಳೆ ಗಾಳಿಯಲ್ಲಿ ತೇಲುತ್ತಿದ್ದ ಜೇನುತುಪ್ಪದ ಬಾಟಲಿ ಹಾಗು ಮುಚ್ಚಳದ ಮಧ್ಯದಲ್ಲಿದ್ದ ಜೇನುತುಪ್ಪ ಸುರುಳಿಯಂತೆ ಸುತ್ತಲು ಆರಂಭಿಸುತ್ತೆ. ಕೂಡಲೇ ಮುಚ್ಚಳ ಹಾಕಿದ ಗಗನಯಾತ್ರಿ ಬಾಟಲಿಯನ್ನ ತೇಲಿ ಬಿಡುತ್ತಾರೆ.