ವಿಶ್ವದ ಮೂಲೆ ಮೂಲೆಯ ಜನರು 2020ಕ್ಕೆ ವಿದಾಯ ಹೇಳಿ 2021ನ್ನು ಸ್ವಾಗತಿಸಿದ್ದಾರೆ. ಮಧ್ಯರಾತ್ರಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಹೊಸ ವರ್ಷವನ್ನ ಆಚರಿಸಲಾಗುತ್ತೆ. ಆದರೆ ಎಲ್ಲ ದೇಶಗಳಲ್ಲೂ ಹೊಸ ವರ್ಷದ ಸಮಯ ಒಂದೇ ಆಗಿರೋದಿಲ್ಲ.
ಹೊಸ ವರ್ಷವನ್ನು ಮೊದಲು ಆಚರಿಸೋದು ಯಾರು..?
ಒಸಿಯಾನಿಯಾ ವಿಶ್ವದಲ್ಲೇ ಎಲ್ಲಕ್ಕಿಂತ ಮೊದಲು ಹೊಸ ವರ್ಷವನ್ನ ಬರದಮಾಡಿಕೊಳ್ಳುವ ಪ್ರದೇಶವಾಗಿದೆ. ದ್ವೀಪ ರಾಷ್ಟ್ರಗಳಾದ ಟೋಂಗಾ, ಸಮೋವಾ ಹಾಗೂ ಕಿರಿಬಾಟಿ ಹೊಸ ವರ್ಷವನ್ನ ಸ್ವಾಗತಿಸುವ ಮೊದಲ ದೇಶಗಳು. ಅಲ್ಲಿ ಭಾರತೀಯ ಕಾಲಮಾನ ಡಿಸೆಂಬರ್ 31ರ ಮಧ್ಯಾಹ್ನ 3.30 ಆರಂಭವಾಗುತ್ತೆ.
ಹೊಸ ವರ್ಷವನ್ನ ಕೊನೆಯದಾಗಿ ಆಚರಿಸುವ ಪ್ರದೇಶ ಹೌಲ್ಯಾಂಡ್ ಹಾಗೂ ಬೇಕರ್ ಆಗಿದೆ. ಭಾರತೀಯ ಕಾಲಮಾನದ ಪ್ರಕಾರ ಜನವರಿ 1ರ ಸಂಜೆ 5.30ರ ಸುಮಾರಿಗೆ ಇಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತೆ.