
ಮದುವೆ ಫಿಕ್ಸ್ ಆಯ್ತು ಅಂದರೆ ಸಾಕು ಸಾಮಾನ್ಯವಾಗಿ ಎಲ್ಲರೂ ತಮ್ಮ ಹಿಂದಿನ ಪ್ರೇಮ ಕತೆಗಳನ್ನ ಮುಚ್ಚಿಡೋಕೆ ಪ್ಲಾನ್ ಮಾಡ್ತಾರೆ. ಮುಂದೆ ಇದು ವೈವಾಹಿಕ ಜೀವನಕ್ಕೆ ಯಾವುದೇ ಅಡಚಣೆ ಉಂಟಾಗಬಹುದು ಎಂಬ ಭಯದಿಂದ ಈ ರೀತಿ ಮಾಡ್ತಾರೆ. ಆದರೆ ಇಂಡೋನೇಷಿಯಾದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ವಧುವಿನ ಮಾಜಿ ಪ್ರಿಯತಮ ಮದುವೆಗೆ ಹೋಗುತ್ತಾನೆ. ತನ್ನ ಹಳೆಯ ಪ್ರಿಯತಮನನ್ನ ಕಂಡು ವಧು ಹೆದರಿಕೊಳ್ಳೋದಿಲ್ಲ. ಬದಲಾಗಿ ತನ್ನ ಪತಿಗೆ ಪರಿಚಯ ಮಾಡಿಸಿಕೊಡುತ್ತಾಳೆ. ಇದಾದ ಬಳಿಕ ನಡೆದ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಎಬ್ಬಿಸಿವೆ.
ಇದು ಇಂಡೋನೇಷಿಯಾದಲ್ಲಿ ನಡೆದ ಘಟನೆಯಾಗಿದೆ. ವಿಡಿಯೋದಲ್ಲಿ ಮದುವೆ ಮಂಟಪಕ್ಕೆ ಬರುವ ಮಾಜಿ ಪ್ರಿಯತಮ ವಧುವನ್ನ ಭೇಟಿ ಮಾಡುತ್ತಾನೆ. ವಧು ಕೂಡ ನಗುತ್ತಲೇ ತನ್ನ ಪತಿಗೆ ಈತನನ್ನ ಪರಿಚಯ ಮಾಡಿಸಿಕೊಡ್ತಾಳೆ. ಅಲ್ಲದೇ ಪತಿಯ ಕಡೆ ನೋಡುತ್ತಾ ನಾನು ಈತನಿಗೆ ಕೊನೆಯ ಬಾರಿಗೆ ಆಲಂಗಿಸಿಕೊಳ್ಳಲೇ ಎಂದು ಕೇಳುತ್ತಾಳೆ. ಇದಕ್ಕೆ ಪತಿ ಸಮ್ಮತಿ ನೀಡುತ್ತಾನೆ. ಮಾಜಿ ಪ್ರಿಯತಮ ನೂತನ ವಧು ವರರನ್ನ ಆಲಂಗಿಸಿಕೊಳ್ಳುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.