ನಿಮಗೇ ಗೊತ್ತಿಲ್ಲದಂತೆ ಅಪರಿಚಿತರೊಬ್ಬರು ನಿಮ್ಮ ಮನೆಯಲ್ಲಿ ದಿನಗಳ ಕಾಲ ಇದ್ದು ಹೋದರೆಂದರೆ ನಿಮಗೆ ಏನನ್ನಿಸುವುದು? ನ್ಯೂಯಾರ್ಕ್ನ ಜೋ ಕಮ್ಮಿಂಗ್ಸ್ ಎಂಬ ವ್ಯಕ್ತಿಗೆ 2009ರಲ್ಲಿ ಇಂಥದ್ದೇ ಅನುಭವವಾಗಿದೆ. ತಮ್ಮ ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಿಡಿಯೋ ತುಣುಕುಗಳನ್ನೂ ಸಹ ಈ ವ್ಯಕ್ತಿ ಹಂಚಿಕೊಂಡಿದ್ದು, ತನ್ನ ಮಾತುಗಳಿಗೆ ಬಲವಾದ ಪುರಾವೆಗಳನ್ನು ಒದಗಿಸಿದ್ದಾರೆ.
ತಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳು ಕಳುವಾಗುತ್ತಿರುವುದನ್ನು ಗ್ರಹಿಸಿದ ಕಮ್ಮಿಂಗ್ಸ್ ಭದ್ರತಾ ಕ್ಯಾಮೆರಾವೊಂದನ್ನು ಇಟ್ಟಿದ್ದರು. ಈ ಫುಟೇಜ್ ಅನ್ನು ಕೆಲ ದಿನಗಳ ಬಳಿಕ ಪರೀಕ್ಷಿಸಿದಾಗ, ಅವರಿಗೆ ದೊಡ್ಡದೊಂದು ಅಚ್ಚರಿ ಕಾದಿತ್ತು.
ಕಬೋರ್ಡ್ನಲ್ಲಿ ಮಹಿಳೆಯೊಬ್ಬರು ರಹಸ್ಯವಾಗಿ ವಾಸಿಸುತ್ತಿದ್ದು, ತನ್ನ ಆಹಾರವನ್ನು ಕದ್ದು ತಿಂದು, ಅಡುಗೆಮನೆ ಸಿಂಕ್ನಲ್ಲಿ ಮೂತ್ರವಿಸರ್ಜನೆ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸರೆಯಾಗಿದೆ. ಈ ವಿಡಿಯೋವನ್ನು 2009ರಲ್ಲಿ ಮೊದಲ ಬಾರಿಗೆ ಶೇರ್ ಮಾಡಲಾಗಿದ್ದು, ಅದೀಗ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ನೆಟ್ಟಿಗರಿಗೆ ಭಾರೀ ಅಚ್ಚರಿಯುಂಟು ಮಾಡಿದೆ.