
ವಿವಿಐಪಿಗಳ ರಕ್ಷಣೆಗಾಗಿ ಅವರ ಸುತ್ತ ಸುತ್ತುವ ಅಥವಾ ಅವರ ಮನೆ ಮುಂದೆ ಭದ್ರತೆ ನೀಡುವ ಬೌನ್ಸರ್ ಗಳನ್ನು ನೋಡಿಯೇ ಇರುತ್ತೇವೆ.
ಇಲ್ಲೊಂದು ಘಟನೆಯಲ್ಲಿ ಕಾಂಗರೂ ಪ್ರಾಣಿ ಮನೆ ಮುಂದೆ ಬೌನ್ಸರ್ ರೀತಿ ಕಾದು ನಿಂತಿರುವ ವಿಡಿಯೋ ವೈರಲ್ ಆಗಿದೆ. ಆಸ್ಟ್ರೇಲಿಯಾದ ಟಿಕ್ ಟಾಕ್ ಬಳಕೆದಾರರು ಈ ವಿಡಿಯೋ ಸೆರೆ ಹಿಡಿದಿದ್ದಾರೆ.
ಕಾಂಗರೂ ಆಕ್ರಮಣ ಮಾಡುವುದರಲ್ಲೂ ಕುಖ್ಯಾತಿ ಹೊಂದಿರುವುದಕ್ಕೆ ಕೆಲವು ಉದಾಹರಣೆ ಇವೆ. ಹೀಗಿರುವಾಗ ಬೌನ್ಸರ್ ರೀತಿ ಮನೆ ಮುಂದೆ ನಿಂತಿರುವುದು ಸೂಕ್ತವಾಗಿದೆ ಎಂಬ ಅಭಿಪ್ರಾಯಗಳು ಬಂದಿವೆ.
ಕೆಲವು ಘಟನೆಗಳನ್ನು ಗಮನಿಸುವಾಗ ಬೌನ್ಸರ್ ಗಳೊಂದಿಗೆ ಹೋಲಿಸಬಹುದಾದ ಪ್ರಾಣಿ ಎಂದು ಅನೇಕರು ಅಭಿಪ್ರಾಯ ನೀಡಿದ್ದಾರೆ.