ಕೊರೊನಾ ಹಾವಳಿ ವಿಪರೀತ ಎನ್ನುವಾಗಲೇ ಚೀನಾದಿಂದ ಮತ್ತೊಂದು ವೈರಸ್ ಹರಡಲು ಸಿದ್ಧವಾಗಿದೆ. ಟಿಕ್- ಬೊರ್ನ್ ವೈರಸ್ ಬಗ್ಗೆ ಆತಂಕ ಶುರುವಾಗಿದ್ದು, ಅದರ ಪೂರ್ವಾಪರಗಳ ಕುರಿತು ಚರ್ಚೆ ಆರಂಭವಾಗಿದೆ.
ಮೊದಲ ಬಾರಿಗೆ 2011ರಲ್ಲಿ ಪತ್ತೆ ಮಾಡಿ ಪ್ರತ್ಯೇಕಿಸಲಾಗಿದೆ ಮತ್ತು ಇದು Bunyavirus ವರ್ಗಕ್ಕೆ ಸೇರಿದೆ ಎಂಬುದು ಪ್ರಾಥಮಿಕ ಮಾಹಿತಿ. ಇದನ್ನು ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಎಂದು ಗುರುತಿಸಲಾಗಿದ್ದು, ತೀವ್ರ ಜ್ವರ ಕಾಡಲಿದೆ.
ಈ ವೈರಸ್ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ 37 ಕ್ಕೂ ಹೆಚ್ಚು ಜನರಿಗೆ ಮತ್ತು ಅನ್ಹುಯಿ ಪ್ರಾಂತ್ಯದ 23 ಜನರಿಗೆ ತಗುಲಿದ್ದು, ಇದುವರೆಗೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಚೀನಾ ಜೊತೆಗೆ ದಕ್ಷಿಣ ಕೊರಿಯಾ, ಜಪಾನ್, ವಿಯಟ್ನಾಂ ಹಾಗೂ ತೈವಾನ್ ನ ಕೆಲ ಭಾಗಗಳಲ್ಲೂ ಇದು ಕಾಣಿಸಿಕೊಂಡಿದೆ ಎನ್ನಲಾಗಿದೆ.