ಬೆಕ್ಕು ಪ್ರಿಯರು ನೀವಾಗಿದ್ರೆ ಅದರ ಭಾಷೆಯನ್ನ ಅರ್ಥ ಮಾಡಿಕೊಳ್ಳೋದು ಎಷ್ಟು ಸವಾಲಿನ ವಿಚಾರ ಅನ್ನೋದು ನಿಮಗೆ ಚೆನ್ನಾಗೇ ಗೊತ್ತಿರುತ್ತೆ.
ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕಿರುವ ಇಂಜಿನಿಯರ್ ಒಬ್ಬರು ಮಿಯಾವ್ ಟಾಕ್ ಎಂಬ ಅಪ್ಲಿಕೇಶನ್ ಕಂಡು ಹಿಡಿದಿದ್ದು, ಈ ಮೂಲಕ ನೀವು ನಿಮ್ಮ ಬೆಕ್ಕು ಏನು ಮಾತನಾಡ್ತಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬಹುದಾಗಿದೆ.
ನನಗೆ ಹಸಿವಾಗಿದೆ, ನಾನು ಖುಷಿಯಾಗಿದ್ದೇನೆ, ನನಗೆ ನೋವಾಗುತ್ತಿದೆ ಹೀಗೆ ವಿವಿಧ ಭಾವನೆಗಳನ್ನ ಈ ಅಪ್ಲಿಕೇಶನ್ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ. ಅಮೆಜಾನ್ ಕಂಪನಿಯ ಮಾಜಿ ಇಂಜಿನಿಯರ್ ಜವೈರ್ ಸಾಂಚೇಝ್ ಎಂಬವರು ಈ ಅಪ್ಲಿಕೇಶನ್ ಕಂಡು ಹಿಡಿದಿದಿದ್ದಾರೆ.
ಬೆಕ್ಕಿನ ಭಾಷೆಗಳಿಗೆ 9 ವಿಧd ಅನುವಾದಗಳು ಈ ಅಪ್ಲಿಕೇಶನ್ಗಳಲ್ಲಿ ಲಭ್ಯವಿದೆ. ಬಳಕೆದಾರರಿಗೆ ಇದಕ್ಕಿಂತ ಜಾಸ್ತಿ ಗೊತ್ತಿದ್ದರೆ ಅವರೂ ಸಹ ಈ ಅಪ್ಲಿಕೇಶನ್ಗೆ ಹೊಸ ಸೌಂಡ್ಗಳನ್ನ ಸೇರಿಸಬಹುದಾಗಿದೆ.