ನೀರಿನಲ್ಲಿ ಯಾವುದೇ ಪ್ರಾಣಿ ಆಡುವುದನ್ನು ನೋಡುವುದಕ್ಕೆ ಖುಷಿ. ಅದರಲ್ಲೂ ಅಪರೂಪದ ಪ್ರಾಣಿಗಳಾದ ಘೇಂಡಾಮೃಗದಂತ ಪ್ರಾಣಿಗಳು ಸ್ನಾನ ಮಾಡುವುದೆಂದರೆ ಇನ್ನಷ್ಟು ವೈರಲ್ ಆಗುವುದರಲ್ಲಿ ಅನುಮಾನವಿಲ್ಲ. ಇದೀಗ ಇದೇ ರೀತಿಯ ವಿಡಿಯೊ ವೈರಲ್ ಆಗಿದೆ.
ಹೌದು, ಇಂಡೋನೇಷ್ಯಾದ ನುರ್ಬಯಾ ಬಖರ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಘೇಂಡಾಮೃಗವೊಂದು ಕೆಸರಲ್ಲಿ ಹೊರಳಾಡುತ್ತ ಸ್ನಾನ ಮಾಡುತ್ತಿದೆ. ಈ ವೇಳೆ ಕೆಸರು ಎನ್ನುವುದನ್ನು ಮರೆತ ಆ ಘೇಂಡಾಮೃಗ, ಹೊರಳಾಗಿ, ಮೈಮೇಲೆ ಕೆಸರು ಹಾಕಿಕೊಂಡು ಆನಂದದಲ್ಲಿ ತೇಲುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ. 30 ಸೆಕೆಂಡ್‌ನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ನೆಟ್ಟಿಗರು ಘೇಂಡಾಮೃಗದ ಈ ರೀತಿಯ ಆಟಕ್ಕೆ ಮನಸೋತಿದ್ದಾರೆ.
ಈ ವಿಡಿಯೋ ಜುಂಗ್ ಕುಲಾನ್ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾಗಿದ್ದು, ಘೇಂಡಾಮೃಗಕ್ಕೆ ಏಳು ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಈ ರೀತಿ ಕೆಸರಲ್ಲಿ ಹೊರಳಾಡುವುದರಿಂದ ದೇಹದ ಉಷ್ಣಾಂಶವನ್ನು ಹದವಾಗಿರಿಸಿಕೊಳ್ಳುತ್ತವೆ ಎಂದು ವಿವರಣೆ ನೀಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಅಗಿದ್ದು 38 ಸಾವಿರ ಮಂದಿ ಲೈಕ್ ಮಾಡಿದ್ದು, 12 ಸಾವಿರಕ್ಕೂ ಹೆಚ್ಚು ಕಾಮೆಂಟ್ ಬಂದಿವೆ.
https://twitter.com/SitiNurbayaLHK/status/1277573220342747137?ref_src=twsrc%5Etfw%7Ctwcamp%5Etweetembed%7Ctwterm%5E1277573220342747137%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fwhat-a-happy-boy-video-of-rare-javan-rhinoceros-taking-mud-bath-goes-viral-watch%2F616207