
ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಅಧಿಕೃತವಾಗಿ ಆಯ್ಕೆಯಾಗುವ ಪ್ರಕ್ರಿಯೆ ಮುಗಿಯುತ್ತಿದ್ದು, ಭಾರತೀಯ ಮೂಲದ ನಂಟಿರುವ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ನೇಮಕಗೊಳ್ಳುತ್ತಿದ್ದಾರೆ.
ಇದೇ ವೇಳೆ ನಿರ್ಗಮಿಸಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಅಕ್ರಮದ ಆಪಾದನೆ ಮಾಡಿದ್ದು, ಅವರು ಮಾಡುತ್ತಿರುವ ಸಾಕಷ್ಟು ಟ್ವೀಟ್‌ಗಳು ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ.
ಬಿಡೆನ್ ಗೆಲುವನ್ನು ಒಪ್ಪಲಾಗದು ಎಂದಿರುವ ಟ್ರಂಪ್ ಫಿಲಡೆಲ್ಫಿಯಾದ ಫೋರ್ ಸೀಸನ್ಸ್ ಲ್ಯಾಂಡ್‌ಸ್ಕೇಪಿಂಗ್ ಪ್ರದೇಶದಲ್ಲಿ ದೊಡ್ಡ ಪತ್ರಿಕಾಗೊಷ್ಠಿಯನ್ನು ಹಮ್ಮಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಟ್ರಂಪ್ ಈ ಪೋಸ್ಟ್ ಜೊತೆಗೆ ಲಗತ್ತಿಸಿರುವ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

