ಅಂತರ ಕಾಯ್ದುಕೊಳ್ಳಬೇಕಿರುವ ಕೊರೊನಾ ಕಾಲದಲ್ಲಿ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ, ಚುಂಬಿಸುವಂತಿಲ್ಲ. ಇನ್ನು ಸುರಕ್ಷಿತ ಲೈಂಗಿಕ ಕ್ರಿಯೆ ಹೇಗೆ ? ಇಲ್ಲಿವೆ ಓದಿ ಟಿಪ್ಸ್.
ಟೆರೆನ್ಸ್ ಹಿಗ್ಗಿನ್ಸ್ ಟ್ರಸ್ಟ್ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕೊರೊನಾದಿಂದಾಗಿ ಸಾಕಷ್ಟು ಜನರು ಲೈಂಗಿಕ ಕ್ರಿಯೆಯಿಂದಲೇ ದೂರ ಉಳಿದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.
ಸಂಶೋಧಕ ಹಾಗೂ ವೈದ್ಯಕೀಯ ನಿರ್ದೇಶಕ ಮೈಕಲ್ ಬ್ರಾಡಿ ಹೇಳುವಂತೆ ಲೈಂಗಿಕ ಕ್ರಿಯೆಯು ಜೀವನದ ಬಹುಮುಖ್ಯ ಭಾಗ. ಏನೇ ಲಾಕ್ ಡೌನ್ ಮಾಡಿದರೂ ಬಹುಕಾಲ ಈ ಕ್ರಿಯೆಯಿಂದ ದೂರ ಇರಿ ಎಂದು ಜನರಿಗೆ ಹೇಳಲಾಗುವುದಿಲ್ಲ. ಹೀಗಾಗಿಯೇ ಈ ಸಂಶೋಧನೆ ನಡೆಸುವ ಮೂಲಕ ಪರಿಹಾರ ಮಾರ್ಗಗಳನ್ನು ಸೂಚಿಸಿದ್ದೇವೆ ಎನ್ನುತ್ತಾರೆ.
ಸಾಧ್ಯವಾದಷ್ಟು ಮನೆಯ ಹೊರಗೆ ದೈಹಿಕ ಸಂಪರ್ಕ ಹೊಂದುವುದು ಉತ್ತಮ. ಸಾಧ್ಯವಾದಷ್ಟು ಒಬ್ಬರೊಂದಿಗೆ ಮಾತ್ರ ಸಂಪರ್ಕ ಇಟ್ಟುಕೊಳ್ಳಬೇಕು. ಕ್ರಿಯೆಗೆ ಮೊದಲ ಮತ್ತು ನಂತರ ಸ್ನಾನ ಮಾಡುವುದು ಉತ್ತಮ. ಈ ಸಂದರ್ಭದಲ್ಲೂ ಮಾಸ್ಕ್ ಧರಿಸಿರಲೇಬೇಕು. ಚುಂಬಿಸುವುದನ್ನು ನಿಯಂತ್ರಿಸಬೇಕು. ಇಲ್ಲವೇ ಬೇರೆ ಯಾರೊಂದಿಗೂ ದೈಹಿಕ ಸಂಪರ್ಕ ಹೊಂದದೆ ಪರ್ಯಾಯ ಮಾರ್ಗ ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದೆ.