![Weak Math Skills Make People More Susceptible to Misinformation About Coronavirus](https://images.news18.com/ibnlive/uploads/2020/10/1602221006_rtx7grzt.jpg)
ಲೆಕ್ಕದಲ್ಲಿ ತುಂಬಾ ದುರ್ಬಲರಾಗಿದ್ದೀರಾ ? ಹಾಗಿದ್ದರೆ, ಕೊರೊನಾ ವಿಚಾರದಲ್ಲಿ ಬಹಳ ಹುಷಾರಾಗಿರಿ. ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದ್ದು, ಅಂಕ ಗಣಿತದಲ್ಲಿ ವೀಕ್ ಇರುವವರು, ಕೊರೊನಾ ಲೆಕ್ಕಾಚಾರದಲ್ಲಿ ದಾರಿ ತಪ್ಪುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದ ಪ್ರಕಾರ, ಕೊರೊನಾ ವೈರಾಣುವಿನ ಸುತ್ತ ಹರಡಿರುವ ಸುಳ್ಳು ಸುದ್ದಿಗಳನ್ನು ಹೆಚ್ಚಾಗಿ ನಂಬುತ್ತಿರುವುದು ಲೆಕ್ಕದಲ್ಲಿ ವೀಕ್ ಇರುವವರಂತೆ. ಯಾವುದನ್ನೂ ವಿಶ್ಲೇಷಣೆಗೆ ಒಳಪಡಿಸದೆಯೇ ಎಲ್ಲವನ್ನೂ ನಂಬುವರ ಸಂಖ್ಯೆಯಲ್ಲಿ ಇಂತಹವರೇ ಹೆಚ್ಚಿದ್ದಾರಂತೆ.
ಐರ್ಲ್ಯಾಂಡ್, ಸ್ಪೇನ್, ಮೆಕ್ಸಿಕೋ, ಅಮೆರಿಕಾ, ಯುರೋಪ್ ಗಳಲ್ಲಿ ಅಧ್ಯಯನ ನಡೆದಿದ್ದು, ಮೂರು ಮಾದರಿಯ ಪರೀಕ್ಷೆ ನೀಡಲಾಗಿತ್ತು. ಅದರಲ್ಲಿ ಕೆಲವು ತಪ್ಪಾದ ಹಾಗೂ ಉಳಿದ ಹಲವು ಸರಿಯಾದ ಪ್ರಶ್ನೆಗಳನ್ನು ಕೇಳಲಾಗಿತ್ತು.
ಆದರೆ, ತಪ್ಪಾದ ಅನೇಕ ಪ್ರಶ್ನೆಗಳನ್ನೇ ಸರಿ ಎಂದು ಭಾವಿಸಿ, ಉತ್ತರಿಸಿದ್ದು, ಬಹುತೇಕರಲ್ಲಿ ಸಂಖ್ಯಾಶಾಸ್ತ್ರದ ಅನಕ್ಷರತೆ ಎಂಬುದೂ ಇದರಿಂದ ತಿಳಿದುಬಂದಿದೆ.