ಕೊರೊನಾ ಸೋಂಕಿನ ನಡುವೆಯೇ ನಮ್ಮ ಜೀವನವೂ ಯಥಾಸ್ಥಿತಿಗೆ ಮರಳುತ್ತಿದೆ. ಶಾಲೆ, ಕಾಲೇಜು, ಕಚೇರಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಆದರೆ, ಬಹುತೇಕ ಪ್ರಕ್ರಿಯೆಗಳು ಆನ್ ಲೈನ್ ಅಲ್ಲಿ ನಡೆಯುತ್ತಿದ್ದು, ಶಾಲೆ – ಕಾಲೇಜು ತರಗತಿ ಪಾಠ ಪ್ರವಚನ ಎಲ್ಲವೂ ವರ್ಚ್ಯುಯಲ್ ಆಗಿಬಿಟ್ಟಿದೆ.
ವಿದ್ಯಾರ್ಥಿಗಳಿನ್ನೂ ಅಘೋಷಿತ ರಜೆಯ ಮನಃಸ್ಥಿತಿಯಲ್ಲೇ ಇದ್ದಾರೆ. ಸೋಂಕು ಕಡಿಮೆಯಾಗಿ ಶಾಲೆ ಆರಂಭ ಆಗುವವರೆಗೆ ಅವರನ್ನೆಲ್ಲ ಕಲಿಕೆಯ ಮನಃಸ್ಥಿತಿಯಲ್ಲಿ ಇಟ್ಟಿರಬೇಕು.
ಹೀಗಾಗಿ ಆನ್ ಲೈನ್ ತರಗತಿ ಅನಿವಾರ್ಯ ಆಗಿದೆ. ಶಿಕ್ಷಕರ ನಿಗಾ ಇಲ್ಲದಿದ್ದರೆ, ಕಲಿಕೆಯ ಮನಃಸ್ಥಿತಿಯಿಂದ ಬಹಳ ದೂರ ಉಳಿದುಬಿಡುವ ಸಾಧ್ಯತೆ ಇದೆ. ಶಿಕ್ಷಣದಲ್ಲೂ ಮಕ್ಕಳು ಹಿಂದೆ ಬೀಳುವ ಅಪಾಯ ಇರುತ್ತದೆ.
ಸದ್ಯ ರಜೆಯ ಮೂಡ್ ನಲ್ಲಿರುವ ಮಕ್ಕಳನ್ನು ಹಿಡಿದಿಡಲು ಜಾರ್ಜಿಯಾದ ಶಿಕ್ಷಕಿ ಕಾಲಿ ಇವಾನ್ಸ್, ರ್ಯಾಪ್ ವಿಡಿಯೋವೊಂದನ್ನು ಮಾಡಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಹರಿಬಿಟ್ಟಿದ್ದಾರೆ. ಸಾಕಿನ್ನು, ಕಲಿಕೆಯತ್ತ ಹೊರಳಿ ಮಕ್ಕಳೇ ಎನ್ನುವ ಸಂದೇಶದೊಂದಿಗೆ ತರಗತಿ, ಪಾಠ, ಪ್ರವಚನದ ಕಡೆಗೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಇದು ವೈರಲ್ ಆಗಿದ್ದು, ಸಹಶಿಕ್ಷಕರೂ ಇದನ್ನು ಅವರವರ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿ ಸ್ನೇಹಿ ರ್ಯಾಪ್ ಸಾಂಗ್ ಈಗ ವೈರಲ್ ಆಗಿ, ಎಲ್ಲರನ್ನೂ ಸೆಳೆಯುತ್ತಿದೆ.
https://www.instagram.com/tv/CD9_Y_XAI4K/?utm_source=ig_embed