ಹೈ ಹೀಲ್ಡ್ ಚಪ್ಪಲಿಗಳನ್ನ ಧರಿಸಿ ನಡೆಯೋದೇ ಒಂದು ಸವಾಲಿನ ವಿಚಾರ. ಅಂತ್ರದಲ್ಲಿ ಇಲ್ಲೊಬ್ಬ ಯುವತಿ ಎತ್ತರೆತ್ತರದ ಚಪ್ಪಲಿಗಳನ್ನ ಧರಿಸಿ ಓಡಿದ್ದು ಈ ವಿಡಿಯೋ ಟಿಕ್ಟಾಕ್ನಲ್ಲಿ ಧೂಳೆಬ್ಬಿಸುತ್ತಿದೆ.
@feliciamonique08 ಎಂಬ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಟಿಕ್ಟಾಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲೂ ಹಲ್ಚಲ್ ಸೃಷ್ಟಿಸಿದೆ.
ವಿಡಿಯೋದಲ್ಲಿ ಯುವತಿ ಕಾಂಕ್ರೀಟ್ ನೆಲ, ರಸ್ತೆ, ಹುಲ್ಲಿನ ಮೇಲೆ, ಕಲ್ಲು ಮಣ್ಣಿರುವ ದಾರಿಯ ಮೇಲೆ ಹೈ ಹೀಲ್ಡ್ಗಳನ್ನ ಧರಿಸಿ ಓಡಿದ್ದಾಳೆ. ಟ್ವಿಟರ್ನಲ್ಲಿ ಫೆಬ್ರವರಿ 12ರಂದು ಈ ವಿಡಿಯೋವನ್ನ ಶೇರ್ ಮಾಡಲಾಗಿದೆ.
ಟ್ವಿಟ್ಟರ್ ನಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಾತ್ರವಲ್ಲದೇ ತರಹೇವಾರಿ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅಂದಹಾಗೆ ಇಷ್ಟು ಹೀಲ್ಡ್ ಚಪ್ಪಲಿ ಧರಿಸಿ ಓಡೋಕೆ ನಿಮ್ಮಿಂದ ಸಾಧ್ಯವೇ..?
https://twitter.com/i/status/1359999472768610317