ಒಮ್ಮೆ ಮೊಸಳೆ ಕಣ್ಣಿಟ್ಟರೆ ಬೇಟೆಯಾಡದೇ ಬಿಡುವುದಿಲ್ಲ ಎನ್ನುವ ಮಾತಿದೆ. ಆದರೆ ಮರಿ ಮೊಸಳೆಗಳ ಹಿಂಡು ಹಕ್ಕಿಯೊಂದನ್ನು ಬೇಟೆಯಾಡಲು ಹೋಗಿ ಪಟ್ಟಿರುವ ಪಾಡಿನ ವಿಡಿಯೊ ವೈರಲ್ ಆಗಿದೆ.
ಹೌದು, ಫ್ಲೋರಿಡಾದಲ್ಲಿ ನಡೆದಿರುವ ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಭಾರಿ ವೈರಲ್ ಆಗಿದೆ. ಮರಿಮೊಸಳೆಗಳ ಗುಂಪೊಂದು ದೊಡ್ಡ ವುಡ್ ಸ್ಟ್ರೋಕ್ ಮೇಲೆ ದಾಳಿ ಮಾಡಲು ಮುಂದಾಗಿವೆ. ಆದರೆ ಪುಟ್ಟ ಮೊಸಳೆಗಳ ಮೇಲೆ ದಾಳಿ ಮಾಡಲು ದೊಡ್ಡ ಪಕ್ಷಿ ಮುಂದಾಗುತ್ತಿದ್ದಂತೆ, ನೀರಿನೊಳಗೆ ಹೋಗುವ ದೃಶ್ಯ ವಿಡಿಯೊದಲ್ಲಿದೆ. ಇದೇ ರೀತಿ ಎರಡು ಬಾರಿ ನಡೆದಿದೆ.
ಇದೀಗ ಈ ವಿಡಿಯೊ ವೈರಲ್ ಆಗಿದ್ದು, ಸುಮಾರು 77 ಸಾವಿರ ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿಗೆ ಲೈಕ್ ಮಾಡಿದ್ದಾರೆ. ಮರಿ ಮೊಸಳೆಗಳನ್ನು ಬೆದರಿಸಿದ ಹಕ್ಕಿಯನ್ನು ಕೆಲವರು ಹೊಗಳಿದರೆ, ಇನ್ನು ಕೆಲವರು ಆ ಮೊಸಳೆಗಳ ಧೈರ್ಯ ಮೆಚ್ಚಿದ್ದಾರೆ.
https://www.instagram.com/p/CBlEXs2g6lq/?utm_source=ig_embed