
ಟ್ರಂಪೋಲಿನ್ ಮೇಲೇರಿ ಕುಣಿಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೀವಮಾನದ ಶಾಕ್ ನೀಡುವ ಘಟನೆಯೊಂದರಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ.
ಹಾವನ್ನು ನೋಡುತ್ತಲೇ ಬೆಚ್ಚಿ ಬಿದ್ದ ಈತ, ಟ್ರಾಂಪೋಲಿನ್ ಮೇಲಿಂದ ತಕ್ಷಣ ಆಚೆಗೆ ಹಾರಿದ್ದು, ಇದರ ವಿಡಿಯೋವನ್ನು ಕಂಡ ಅನೇಕರು ಬಲೇ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಟಿಕ್‌ಟಾಕ್‌ನಲ್ಲಿ ಈ ವಿಡಿಯೋವನ್ನು 30 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ.